ಕೊಪ್ಪಳ: ಆರ್ಥಿಕವಾಗಿ ಸದೃಢರಾಗಬೇಕಂದರೆ ಸಾಧಿಸುವ ಛಲ ಹಾಗೂ ಪರಿಶ್ರಮ ಎರಡೂ ಇದ್ದರೆ ಏನಾದರು ಮಾಡಬಹುದು ಎಂಬುವುದಕ್ಕೆ ಈ ಮಹಿಳೆಯರು ಸಾಕ್ಷಿಯಾಗಿದ್ದಾರೆ.
ಈ ಮಹಿಳೆಯರಿಗೆ ತಾವು ಕಲಿತ ಕಸೂತಿ ಕಲೆ ಬಾಳಿಗೆ ಬೆಳಕಾಗಿದೆ. ಬಾಳೆ ದಿಂಡಿನ ವೆಸ್ಟೇ ಇವರ ಬಂಡವಾಳ.ಹೀಗೊಂದು ಕಸೂತಿ ಕಮಾಲ್ ನಗರದ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆಯುತ್ತಿದೆ.
ಎನ್ ಜಿಒ ಸಂಸ್ಥೆ ದಿ ಕಿಷ್ಕಿಂಧ ಟ್ರಸ್ಟ್ ಇವರು ಮಹಿಳೆಯರ ಕಸೂತಿಗೆ ಸಾಥ್ ನೀಡಿ ರಾಜ್ಯ, ಅಂತರಾಜ್ಯ, ರಾಷ್ಟ ಹಾಗೂ ವಿದೇಶಿಗರಿಗೂ ಇಷ್ಟವಾಗುವಂತೆ ವಿಭಿನ್ನವಾದ ಕಸೂತಿ ಕಲೆಯನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ ಹಾಗೂ ಇದಕ್ಕೆ ನಾನಾ ಕಡೆಗಳಿಂದ ಸಖತ್ ರೆಸ್ಪಾನ್ಸ್ ಕೂಡ ಬರುತ್ತಿದೆ.
ಬಾಳೆ ನಾರಿನಿಂದ ವ್ಯಾನಿಟಿ ಬ್ಯಾಗ್, ಬುಟ್ಟಿ, ಹಾರ, ಅಲಂಕಾರಿಕ ವಸ್ತುಗಳು ನೋಡುಗರ ಮನ ಸೆಳೆಯುತ್ತಿದೆ.ಸಂಸ್ಥೆಯಲ್ಲಿ 200 ಕಸೂತಿ ಕಲೆಗಾರರಿದ್ದು ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಂಸ್ಥೆ ಆಧಾರವಾಗಿ ನಿಂತಿರುವುದು ಪ್ರಶಂಸೆಗೆ ಕಾರಣವಾಗಿದೆ
PublicNext
01/12/2021 01:26 pm