ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐ.ಟಿ. ಉದ್ಯೋಗಿಗಳಿಗೆ ಗುಡ್ ನ್ಯೂಸ್ : 120% ರಷ್ಟು ವೇತನ ಹೆಚ್ಚಳದೊಂದಿಗೆ ಬೋನಸ್ ಕೂಡ ಜಾಸ್ತಿ

ಕೊರೊನಾ ಸಾಂಕ್ರಾಮಿಕದ ಆರಂಭದಲ್ಲಿ ಎಲ್ಲಾ ಉದ್ಯಮಗಳು ನೆಲಕ್ಕಚ್ಚಿದ್ದವು. ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾಮಾಡುವ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಎಷ್ಟೋ ಜನ ಉದ್ಯೋಗ ಕಳೆದುಕೊಂಡಿದ್ದರು. ಪ್ರಸ್ತುತ ಸಾಂಕ್ರಾಮಿಕದ ಒಂದೂವರೆ ವರ್ಷಗಳ ಬಳಿಕ ಆರ್ಥಿಕ ಚಟುವಟಿಕೆಗಳು ಪುನಶ್ಚೇತನ ಕಂಡುಕೊಳ್ಳುತ್ತಿವೆ.

ಕಂಪೆನಿಗಳು ನೇಮಕಾತಿಗಾಗಿ, ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ.) ಕಂಪೆನಿಗಳ ನೇಮಕಾತಿಗೆ ಸಿದ್ಧವಾಗುತ್ತಿದ್ದಂತೆ ಎಲ್ಲವೂ ಬದಲಾಗುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವ (ವರ್ಕ್ ಫ್ರಮ್ ಹೋಮ್) ಮಾದರಿಯಿಂದ ಪ್ರತಿ ವಲಯದಲ್ಲೂ ತಾಂತ್ರಿಕ ಬದಲಾವಣೆ ಆಗಿರುವುದರಿಂದ ನೇಮಕಾತಿಯಲ್ಲಿ ಕೊವಿಡ್ ಮುಂಚಿನ ಸ್ಥಿತಿ ಮರಳುತ್ತಿದೆ.

ಐ.ಟಿ. ವೃತ್ತಿಪರರ ಬೇಡಿಕೆಯು ಶೇಕಡಾ 400ರಷ್ಟು ಬೆಳೆದಿದೆ ಎಂದು ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಕೊವಿಡ್-19 ಪರಿಣಾಮವನ್ನು ವಿಶ್ಲೇಷಿಸುವ ವರದಿಯಲ್ಲಿ ಜಾಬ್ ಸರ್ಚ್ ಪೋರ್ಟಲ್ ಇನ್ ಡೀಡ್ ಇಂಡಿಯಾ ಹೇಳಿದೆ. ಜನವರಿ 2020 ಮತ್ತು ಫೆಬ್ರವರಿ 2021ರ ನಡುವೆ ಅಪ್ಲಿಕೇಷನ್ ಡೆವಲಪರ್, ಲೀಡ್ ಕನ್ಸಲ್ಟೆಂಟ್, ಸೇಲ್ಸ್ ಫೋರ್ಸ್ ಡೆವಲಪರ್ ಮತ್ತು ಸೈಟ್ ರಿಲಯಬಿಲಿಟಿ ಎಂಜಿನಿಯರ್ ಸೇರಿದಂತೆ ಅನುಭವಿ ತಾಂತ್ರಿಕ ವೃತ್ತಿಪರರ ಬೇಡಿಕೆ ಶೇಕಡಾ 150ರಿಂದ 300ರಷ್ಟು ಹೆಚ್ಚಾಗಿದೆ.

ತಮ್ಮ ಸಂಸ್ಥೆಗೆ ಸಿಬ್ಬಂದಿಯಾಗಿ ಹೊಸ ಪ್ರತಿಭೆಗಳನ್ನು ಸೇರಿಸುವುದರ ಹೊರತಾಗಿ ಕಂಪೆನಿಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಸಂಬಳವನ್ನು ನೀಡುತ್ತಿವೆ. ಐ.ಟಿ. ಕಂಪೆನಿಗಳು ಪೂರ್ಣ ಪ್ರಮಾಣದ ಸ್ಟಾಕ್ ಎಂಜಿನಿಯರ್ ಗಳಿಗೆ ಶೇಕಡಾ 70ರಿಂದ 120ರಷ್ಟು ವೇತನ ಹೆಚ್ಚಾಗಿ ನೀಡುತ್ತಿವೆ. ಹಿಂದಿನ ವರ್ಷಗಳಲ್ಲಿ ಈ ಸಂಬಳ ಹೆಚ್ಚಳವು ಶೇಕಡಾ 20ರಿಂದ 30ರ ಮಧ್ಯೆ ಇತ್ತು.

ವೇತನ ಹೆಚ್ಚಳದ ಹೊರತಾಗಿ ಭಾರತೀಯ ಮಾಹಿತಿ ತಂತ್ರಜ್ಞಾನ ಪ್ರಮುಖ ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೋ ಮತ್ತು ಇನ್ಫೋಸಿಸ್ ಭಾರತದಾದ್ಯಂತ ಆಕ್ರಮಣಕಾರಿಯಾಗಿ ನೇಮಕ ಮಾಡಲು ಯೋಜಿಸುತ್ತಿವೆ. ಒಟ್ಟಿನಲ್ಲಿ ಐ.ಟಿ. ವಲಯದ ವೇತನ ಬಿಲ್ FY22ರಲ್ಲಿ 1.6-1.7 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

Edited By : Nirmala Aralikatti
PublicNext

PublicNext

24/09/2021 08:39 am

Cinque Terre

40.23 K

Cinque Terre

0

ಸಂಬಂಧಿತ ಸುದ್ದಿ