ಬೆಂಗಳೂರು: ಬಂಗಾರ ಪ್ರಿಯರಿಗೆ ಖುಷಿ ಸಂಗತಿ ಅಂದ್ರೆ ಇಂದು 22 ಕ್ಯಾರೆಟ್ ಚಿನ್ನ ದರ 10 ಗ್ರಾಂಗೆ 42,700 ರೂಪಾಯಿ ಇದೆ. ನಿನ್ನೆಗಿಂತ ಇಂದು 550 ರೂಪಾಯಿ ಇಳಿಕೆ ಕಂಡಿದೆ. 24 ಕ್ಯಾರೆಟ್ 10ಗ್ರಾಂ ಚಿನ್ನ ದರ ನಿನ್ನೆ 47,180ಕ್ಕೆ ಮಾರಾಟವಾಗಿದ್ದು, ಇದೀಗ ಚಿನ್ನ ದರ 46,580ಕ್ಕೆ ಇಳಿದಿದೆ.
ದೈನಂದಿನ ದರ ಬದಲಾವಣೆಯಲ್ಲಿ 600 ರೂಪಾಯಿಯಷ್ಟು ಇಳಿಕೆ ಕಂಡಿದೆ. ಹಾಗೂ ಬೆಳ್ಳಿ ದರವೂ ಇಳಿಕೆಯತ್ತ ಮುಖ ಮಾಡಿದ್ದು 1 ಕೆ.ಜಿ ಬೆಳ್ಳಿ ದರ ನಿನ್ನೆ 70,600 ರೂಪಾಯಿಗೆ ಮಾರಾಟವಾಗಿದೆ. ಇಂದು 69,600 ರೂಪಾಯಿಗೆ ಇಳಿದಿದೆ. ಅಂದರೆ ದೈನಂದಿನ ದರ ಬದಲಾವಣೆಯಲ್ಲಿ 1,000 ರೂಪಾಯಿಯಷ್ಟು ಇಳಿಕೆ ಕಂಡಿದೆ.
ಹಾವು ಏಣಿ ಆಟವಾಡುತ್ತ ಗ್ರಾಹಕರಿಗೆ ಗೊಂದಲ ಉಂಟು ಮಾಡಿದ್ದ ಚಿನ್ನ,ಬೆಳ್ಳಿ ದರ ಇದೀಗ ಇಳಿಕೆ ಕಂಡಿರುವುದು ಗ್ರಾಹಕರಿಗೆ ಖುಷಿ ತಂದಿದೆ.
ಬೆಳ್ಳಿದರ :
ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರವೂ ಇಳಿಕೆಯತ್ತ ಸಾಗಿದ್ದು, 1 ಗ್ರಾಂ ಬೆಳ್ಳಿ ದರ ನಿನ್ನೆ 70.60 ರೂಪಾಯಿ ಇದ್ದ ದರ ಇಂದು, 69.60 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 1 ರೂಪಾಯಿಯಷ್ಟು ಇಳಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 564.80 ರೂಪಾಯಿ ಇದ್ದು, ಇಂದು 556.80 ರೂಪಾಯಿಗೆ ಇಳಿದಿದೆ.
PublicNext
28/02/2021 09:31 am