ಬಹುನಿರೀಕ್ಷಿತ 5ಜಿ ಸೇವೆಗಳನ್ನು ಮುಂದಿನ ಎರಡು ತಿಂಗಳಲ್ಲಿ ಆರಂಭಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿ. (ಆರ್‌ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಇಂದು ಘೋಷಿಸಿದ್ದಾರೆ. ಆರ್‌ಐಎಲ್‌ನ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಬಾನಿ ಈ ವಿಷಯ ಬಹಿರಂಗಪಡಿಸಿದ್ದಾರೆ.
"ಜಿಯೋ ಡಿಜಿಟಲ್ ಸಂಪರ್ಕದಲ್ಲಿ ವಿಶೇಷವಾಗಿ ಸ್ಥಿರ ಬ್ರಾಡ್‌ಬ್ಯಾಂಡ್‌ನಲ್ಲಿ ಮಹಾಜಿಗಿತಕ್ಕೆ ಯೋಜನೆ ರೂಪಿಸಿದೆ. ಅದನ್ನು ನಾನಿಂದು ಘೋಷಿಸಲು ಬಯಸುತ್ತೇನೆ. ಜಿಯೋ 5ಜಿಯೊಂದಿಗೆ ನಾವು ಸರಿಸಾಟಿಯಿಲ್ಲದ ಡಿಜಿಟಲ್ ಅನುಭವಗಳು ಮತ್ತು ಸ್ಮಾರ್ಟ್ ಹೋಮ್ ಪರಿಹಾರಗಳೊಂದಿಗೆ 10 ಕೋಟಿ ಮನೆಗಳನ್ನು ಸಂಪರ್ಕಿಸುತ್ತೇವೆ," ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಜಿಯೋ 5ಜಿಯೊಂದಿಗೆ ನಾವು ಎಲ್ಲರನ್ನೂ, ಎಲ್ಲಾ ಸ್ಥಳವನ್ನೂ ತಲುಪಲಿದ್ದು, ಉತ್ತಮ ಗುಣಮಟ್ಟದ ಮತ್ತು ಅತ್ಯಂತ ಕೈಗೆಟುಕುವ ದರದ ಡೇಟಾದೊಂದಿಗೆ ಸಂಪರ್ಕಿಸುತ್ತೇವೆ ಎಂದು ಅಂಬಾನಿ ಹೇಳಿದ್ದು, 5ಜಿಯೊಂದಿಗೆ ಭಾರತದ ಅಗತ್ಯಗಳನ್ನು ಪೂರೈಸುವುದರ ಜೊತೆಗೆ, ಜಾಗತಿಕ ಮಾರುಕಟ್ಟೆಗಳಿಗೆ ಡಿಜಿಟಲ್ ಪರಿಹಾರಗಳನ್ನು ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
PublicNext
29/08/2022 06:08 pm