ಬೆಂಗಳೂರು: ಒಂದು ಕಡೆ ಬ್ರಿಟನ್ ಸಂಸತ್‌ನಲ್ಲಿ ಭಾರತೀಯ ರಿಷಿ ಹವಾ ಜೋರಾಗುತ್ತಿರುವ ಹಾಗೆಯೇ ಈ ಕಡೆ ಆಸ್ಟ್ರೇಲಿಯಾ ರಾಜಕಾರಣದಲ್ಲೂ ಭಾರತದ ಮೂಲದವರು ಸದ್ದು ಮಾಡತೊಡಗಿದ್ದಾರೆ. ಅದರಲ್ಲೂ ಇವರು ಕನ್ನಡಿಗರು ನಮ್ಮ ಚಿನ್ನಡ ಬೀಡು ಕೋಲಾರದವರು ಅನ್ನೋದು ಬಹಳ ವಿಶೇಷ.
ಹೌದು. ಕೋಲಾರದ ಮಾದನ ಹಳ್ಳಿಯ ಮಂಜುನಾಥ್ ಇದೀಗ ಆಸ್ಟ್ರೇಲಿಯಾದ ವಿಕ್ಟೋರಿಯಾ ಪಾರ್ಲಿಮೆಂಟ್‌ಗೆ State MP ಆಗುವ ಸನಿಹದಲ್ಲಿದ್ದಾರೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಂಜುನಾಥ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಆಸ್ಟ್ರೇಲಿಯಾದ ಮೆಲ್ಬನ್೯ ಸಿಟಿ ನಿವಾಸಿಯಾಗಿರುವ 39ರ ವಯಸ್ಸಿನ ಮಂಜುನಾಥ್ ತಮ್ಮ ಹಲವು ಜನಪರ ಕಾಳಜಿ ಕಾರ್ಯಕ್ರಮಗಳಿಂದ ಆ ಭಾಗದಲ್ಲಿ ಜನಜನಿತರಾಗಿರುವವರು. ಇವರ ಜನಪ್ರಿಯತೆಯನ್ನು ಕಂಡ ಲಿಬೆರಲ್ ಪಾರ್ಟಿ ಆಫ್ ಆಸ್ಟ್ರೇಲಿಯಾ South east metropolitan regionಗೆ ಮಂಜುನಾಥ್ ಅವರನ್ನೇ ತಮ್ಮ ಅಭ್ಯರ್ಥಿಯನ್ನಾಗಿಸುವ ತಯಾರಿಯಲ್ಲಿದೆ.
ಆಸ್ಟ್ರೇಲಿಯಾ ಲಿಬೆರಲ್ ಪಾರ್ಟಿ ನಡೆಸಿದ Internal ಸಮೀಕ್ಷೆಯಲ್ಲಿ ಮಂಜುನಾಥ್ ಅವರೇ ಬಹಳ ಮುಂಚೂಣಿಯಲ್ಲಿದ್ದಾರೆ. ಈ ಭಾಗದಲ್ಲಿ ಹೆಚ್ಚಾಗಿ ಇರುವ ಭಾರತೀಯರು ಅದರಲ್ಲೂ ಕನ್ನಡಿಗರು ಮಂಜುನಾಥ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲವೂ ಅಂದು ಕೊಂಡ ಹಾಗೆ ಆದರೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಸಂಸತ್ತಿನಲ್ಲಿ ಕನ್ನಡದ ಕಲರವ ಮಾರ್ಧನಿಸುವ ದಿನಗಳು ದೂರವಿಲ್ಲಾ. ಪ್ರವೀಣ್ ನಾರಾಯಣ ರಾವ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Exclusive Report-- By Praveen Rao
PublicNext
01/08/2022 08:37 pm