ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ದೇಶದಲ್ಲೇ ಅತಿ ದುಬಾರಿ ಸೋಪ್ ತಯಾರಿ - ಕೇವಲ ಒಂದು ಸೋಪ್‌ಗೆ 4000 ಸಾವಿರ ರೂ.

ಬೆಂಗಳೂರು : ಈ ಸೋಪ್‌ನ ಬೆಲೆ ಕೇಳಿದ್ರೇನೆ ಬೆಚ್ಚಿ ಬೀಳ್ತೀರಾ..! ಈ ಸೋಪ್‌ನ ಬಳಕೆ ಮಾಡ್ಬೇಕಾ ಅಥವಾ ಜೋಪಾನವಾಗಿ ಎತ್ತೀಡಬೇಕಾ ಅಂತ ಯೋಚನೆ ಮಾಡಬೇಕು..ಹೌದು, ಭಾರತದಲ್ಲೇ ದುಬಾರಿ ಸೋಪ್ ತಯಾರಿಕೆ, ಕೇವಲ ಒಂದು ಸೋಪ್‌ನ ಬೆಲೆ ಬರೋಬ್ಬರಿ 4 ಸಾವಿರ ರೂಪಾಯಿ ಅಂತೆ... ಏನಪ್ಪಾ ಇದೇ ಈ ಸೋಪ್‌ನಲ್ಲಿ..? ಅಂತ ಯೋಚಿಸ್ತೀದೀರಾ ಇಲ್ಲಿದೆ ನೋಡಿ ಸ್ಟೋರಿ..

ಮೈಸೂರ್ ಸ್ಯಾಂಡಲ್ ಸೋಪ್ ಈಗಾಗಲೇ ಎಲ್ಲರ ಫೇವರಿಟ್ ಆಗಿದೆ. ನಮ್ಮ ದೇಶದಲ್ಲಿ ಅಲ್ಲ ಶ್ರೀಗಂಧದ ಪರಿಮಳಕ್ಕೆ ವಿದೇಶದಲ್ಲೂ ಫ್ಯಾನ್ಸ್ ಇದ್ದಾರೆ. ಇದೀಗ ಕೆ.ಎಸ್ ಮತ್ತು ಡಿ.ಎಲ್ ಭಾರತದಲ್ಲಿಯೇ ದುಬಾರಿ ಸೋಪ್ ತಯಾರಿಕೆಯ ಪ್ಲಾನ್ ನಲ್ಲಿದ್ದು, ಇನ್ನು ಎರಡು ಅತ್ಯಂತ ದುಬಾರಿ ಸೋಪ್ ಮಾರುಕಟ್ಟೆಗೆ ಬರಲಿವೆ.

ಶ್ರೀಗಂಧದ ಎಣ್ಣೆಯನ್ನು ಹೆಚ್ಚು ಬಳಸಿ ಉತ್ಕೃಷ್ಟ ಗುಣಮಟ್ಟದ ಮೈಸೂರು ಸ್ಯಾಂಡಲ್ ಸೋಪ್ ಮಾರುಕಟ್ಟೆಗೆ ಕಾಲಿಡಲಿವೆ. ಒಂದು ಸೋಪ್ ಬೆಲೆ ಬರೋಬ್ಬರಿ 4 ಸಾವಿರ ರೂಪಾಯಿ ಇರಲಿದೆ. ಇದನ್ನು ವಿದೇಶಕ್ಕೆ ಕಳಿಸುವ ಉದ್ದೇಶದಿಂದ ಈ ಪ್ಲಾನ್ ರೂಪಿಸಿಲಾಗುತ್ತಿದೆ ಎಂದು ಕೆಎಸ್ ಮತ್ತು ಡಿಎಲ್ ಚೇರ್ಮನ್ ಅಪ್ಪಾಜಿ ನಾಡಗೌಡ ಅವರು ತಿಳಿಸಿದ್ದಾರೆ.

Edited By : Somashekar
PublicNext

PublicNext

10/12/2024 07:48 pm

Cinque Terre

45.43 K

Cinque Terre

0