ವಾಷಿಂಗ್ಟನ್: ಕಳೆದ ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕವು ಆರ್ಥಿಕ ಭೀಕರತೆಯನ್ನು ಎದುರಿಸುತ್ತಿದೆ. ಅಲ್ಲಿನ ಹಣದುಬ್ಬರ ಏರಿಳಿತ ಕಾಣುತ್ತಿದೆ. ಹೀಗಾಗಿ ಅಮೆರಿಕ ಸರಕಾರವು ಅಕ್ಟೋಬರ್ 1ರಿಂದ ಹೊಸ ಆರ್ಥಿಕ ವರ್ಷವನ್ನು 31 ಟ್ರಿಲಿಯನ್ ಡಾಲರ್ ಸಾಲದೊಂದಿಗೆ ಆರಂಭಿಸಿದೆ.
ಈಗಾಗಲೇ ಅಮೆರಿಕದ ಆರ್ಥಿಕ ಭವಿಷ್ಯದ ಬಗ್ಗೆ ಆರ್ಥಿಕ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕ್ಯಾಲೆಂಡರ್ ವರ್ಷವು ಜನವರಿ 1ರಿಂದ ಆರಂಭವಾದರೂ, ಭಾರತದಲ್ಲಿ ಹಣಕಾಸು ವರ್ಷ ಏಪ್ರಿಲ್ 1ರಿಂದ ಆರಂಭವಾಗುತ್ತದೆ. ಅಮೆರಿಕದಲ್ಲಿ ಆರ್ಥಿಕ ವರ್ಷವು ಅಕ್ಟೋಬರ್ 1ರಿಂದ ಆರಂಭವಾಗುವುದು ವಾಡಿಕೆ. ಈ ಸಂದರ್ಭದಲ್ಲಿ ಅಮೆರಿಕ ಸರಕಾರದ ಖಜಾನೆ ಇಲಾಖೆಯು ತನ್ನ ಹಣಕಾಸಿನ ಸ್ಥಿತಿಗತಿಯನ್ನು ಬಿಡುಗಡೆ ಮಾಡಿದೆ.
ಅಮೆರಿಕ ಸರಕಾರವು ಸಾಲದ ಮಿತಿಯನ್ನು 31.4 ಲಕ್ಷ ಕೋಟಿ ಡಾಲರ್‌ಗೆ ಇಟ್ಟುಕೊಂಡಿತ್ತು. ಈಗಾಗಲೇ ತನ್ನ ಮಿತಿಯ ಸಮೀಪಕ್ಕೆ ಅಮೆರಿಕದ ಸಾಲ ಪ್ರಮಾಣವು ಬಂದು ನಿಂತಿದೆ. ಹೆಚ್ಚುತ್ತಿರುವ ಹಣದುಬ್ಬರ, ಮಿತಿ ಮೀರಿದ ಸಾಲದ ಹೊರೆಯಿಂದ ಅಮೆರಿಕದಲ್ಲಿ ಬಡ್ಡಿ ದರ ಗರಿಷ್ಠ ಮಟ್ಟ ತಲುಪಿದೆ.
PublicNext
06/10/2022 10:42 pm