ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಣಿ ಎಲಿಜಬೆತ್ ಬಳಸಿದ್ದ ಟೀಬ್ಯಾಗ್ 9.56 ಲಕ್ಷ ರೂ.ಗೆ ಮಾರಾಟ.!

ರಾಣಿ ಎಲಿಜಬೆತ್ ಬಳಸಿದ್ದಾರೆಂದು ಹೇಳಲಾಗುವ ಟೀಬ್ಯಾಗ್ ಅನ್ನು ಅವರ ಮರಣದ ನಂತರ eBay ನಲ್ಲಿ 12,000 ಡಾಲರ್‌ (ಸುಮಾರು ₹ 9.56 ಲಕ್ಷ)ಗೆ ಮಾರಾಟ ಮಾಡಲಾಗಿದೆ.

ಇಂಗ್ಲೆಂಡ್ ರಾಣಿ ಎಲಿಜಬೆತ್ 96 ವರ್ಷಗಳ ತುಂಬು ಜೀವನವನ್ನು ನಡೆಸಿ ಇಹಲೋಕ ತ್ಯಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ರಾಣಿ ಹಾಗೂ ರಾಜಮನೆತನಕ್ಕೆ ಸೇರಿದ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಈ ನಡುವೆ ಆನ್‌ಲೈನ್‌ ವಸ್ತುಗಳ ಪೂರೈಕೆ ಮಾಡುವ ಸಂಸ್ಥೆ Ebay ಆನ್‌ಲೈನ್‌ನಲ್ಲಿ ರಾಣಿ ಎಲಿಜಬೆತ್ ಬಳಸಿದ್ದ ಟೀ ಬ್ಯಾಗ್‌ನ್ನು ಭಾರೀ ಮೊತ್ತಕ್ಕೆ ಹರಾಜಿಗೆ ಇಡುವ ಮೂಲಕ ಸುದ್ದಿಯಾಗಿತ್ತು.

ಈ ಟೀ ಬ್ಯಾಗ್‌ ಅನ್ನು 1998 ರಲ್ಲಿ ರಾಣಿ ವಾಸವಿದ್ದ ವಿಂಡ್ಸರ್ ಕ್ಯಾಸಲ್‌ನಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಬಳಕೆದಾರರು Ebay ಪುಟದಲ್ಲಿ ಹೇಳಿಕೊಂಡಿದ್ದಾರೆ. ಈ ಟೀ ಬ್ಯಾಗ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ 12,000 ಡಾಲರ್‌ಗೆ ಅಂದರೆ ಭಾರತದ 956,471 ರೂಪಾಯಿ ದರ ನಿಗದಿಪಡಿಸಲಾಗಿತ್ತು.

Edited By : Vijay Kumar
PublicNext

PublicNext

10/09/2022 04:16 pm

Cinque Terre

25.72 K

Cinque Terre

1

ಸಂಬಂಧಿತ ಸುದ್ದಿ