ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓಲಾ, ಊಬರ್ ವಿಲೀನ ಸಾಧ್ಯತೆ

ನವದೆಹಲಿ: ಕ್ಯಾಬ್ ಸೇವೆ ನೀಡುವ ದೇಶದ ಮುಂಚೂಣಿ ಕಂಪನಿಗಳೆಂದರೆ ಓಲಾ ಹಾಗೂ ಊಬರ್. ಈ ಎರಡೂ ಕಂಪನಿಗಳು ವಿಲೀನಗೊಳ್ಳುವ ಸಾಧ್ಯತೆ ಇದೆ ಎಂಬುದು ವರದಿಯಾಗಿದೆ.

ಓಲಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಿಷ್ ಅಗರ್‌ವಾಲ್ ಅವರು ಇತ್ತೀಚೆಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಊಬರ್ ಕಂಪನಿಯ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಇಲ್ಲಿಯವರೆಗೆ ಓಲಾ-ಊಬರ್ ವಿಲೀನದ ಬಗ್ಗೆ ಎರಡೂ ಕಂಪನಿಗಳು ಮಾಹಿತಿ ಅಧಿಕೃತಗೊಳಿಸಿಲ್ಲ. ತನ್ನ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ನೀಡಲು ಕಂಪನಿಗಳು ನೂರಾರು ಕೋಟಿ ಖರ್ಚು ಮಾಡುತ್ತಿವೆ. ಈ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿವೆ‌.

Edited By : Nagaraj Tulugeri
PublicNext

PublicNext

30/07/2022 08:49 pm

Cinque Terre

30.67 K

Cinque Terre

0

ಸಂಬಂಧಿತ ಸುದ್ದಿ