ವಾಷಿಂಗ್ಟನ್: ಖ್ಯಾತ ಉದ್ಯಮಿ ಬಿಲಿಯನೇರ್ ಎಲೋನ್ ಮಸ್ಕ್ ಅವರ ತೃತೀಯ ಲಿಂಗಿ ಮಗಳು ತಮ್ಮ ತಂದೆಯೊಂದಿಗೆ ಸಂಬಂಧ ಕಡಿದುಕೊಳ್ಳಲು ಸಿದ್ಧರಾಗಿದ್ದಾರೆ. ಈ ಸಂಬಂಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
18 ವರ್ಷ ವಯಸ್ಸಿನ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ತನ್ನ ಲಿಂಗ ಗುರುತಿಸುವಿಕೆಯನ್ನು ಪುರುಷನಿಂದ ಮಹಿಳೆಗೆ ಬದಲಾಯಿಕೊಂಡಿದ್ದಾರೆ. ಈ ಹಿನ್ನೆಲೆ ಆಕೆ ತನ್ನ ಮೂಲ ಹೆಸರು, ಹುಟ್ಟಿದ್ದ ಮೂಲ ಮತ್ತು ತಂದೆ ಹೆಸರನ್ನು ಬಿಟ್ಟು, ತನ್ನ ಹೊಸ ಹೆಸರನ್ನು ನೋಂದಾಯಿಸಲು ಅರ್ಜಿಯನ್ನು ಏಪ್ರಿಲ್‍ನಲ್ಲಿ ಸಾಂಟಾ ಮೋನಿಕಾದಲ್ಲಿರುವ ಲಾಸ್ ಏಂಜಲೀಸ್ ಕೌಂಟಿ ಸುಪೀರಿಯರ್ ಕೋರ್ಟ್‌ಗೆ ಕೇಳಿಕೊಂಡಿದ್ದಾಳೆ. ಆದರೆ ಇದು ಇತ್ತೀಚೆಗೆ ಬೆಳಕಿಗೆ ಬಂದಿದೆ.
ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ತಾಯಿ ಜಸ್ಟಿನ್ ವಿಲ್ಸನ್ ಅವರು 2008ರಲ್ಲಿ ಮಸ್ಕ್ ಜೊತೆ ವಿಚ್ಛೇದನ ಪಡೆದುಕೊಂಡಿದ್ದರು.
PublicNext
21/06/2022 02:11 pm