ಇಸ್ಲಾಮಾಬಾದ್: ದೇಶವು ದಿವಾಳಿಯಾಗುವುದನ್ನು ತಪ್ಪಿಸಲು ಇಂಧನ ಬೆಲೆಗಳನ್ನು ಹೆಚ್ಚಿಸುವ ತಮ್ಮ ಸರ್ಕಾರದ ಕ್ರಮ ಅಗತ್ಯ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ಹೇಳಿದ್ದಾರೆ.
ಪಾಕಿಸ್ತಾನವು ಕಳೆದ ಗುರುವಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಲೀಟರ್‌ಗೆ 30 ರೂ. ಹೆಚ್ಚಿಸಿದೆ. ಏರಿಕೆಯ ನಂತರ ಈಗ ಪೆಟ್ರೋಲ್ ಬೆಲೆ 179.85 ರೂ., ಡೀಸೆಲ್ 174.15 ರೂ., ಸೀಮೆಎಣ್ಣೆ 155.95 ರೂ. ಮತ್ತು ಲಘು ಡೀಸೆಲ್ 148.41 ರೂ. ಆಗಿದೆ.
ಪಾಕಿಸ್ತಾನದ ಹಣಕಾಸು ಸಚಿವರ ಪ್ರಕಾರ, ಪೆಟ್ರೋಲ್ ಬೆಲೆ ಹೆಚ್ಚಳ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಕಾರ್ಯಕ್ರಮದ ಪುನಶ್ಚೇತನ ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ನಂತರ ರಾಷ್ಟ್ರವನ್ನುದ್ದೇಶಿಸಿ ಮಾಡಿದ್ದ ಮೊದಲ ಭಾಷಣದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಸರ್ಕಾರ ಎದುರಿಸುತ್ತಿರುವ ದೇಶೀಯ ಸಮಸ್ಯೆಯ ಬಗ್ಗೆ ಹೆಚ್ಚಾಗಿ ಮಾತನಾಡಿದ್ದರು.
PublicNext
28/05/2022 10:48 am