ಶ್ರೀಲಂಕಾ: ಈ ದೇಶದ ಟೈಮೇ ಚೆನ್ನಾಗಿಲ್ಲ ನೋಡಿ. ಆರ್ಥಿಕ ಬಿಕ್ಕಟ್ಟಿನಿಂದ ಇಲ್ಲಿಯ ಜನ ತತ್ತರಿಸುತ್ತಿದ್ದಾರೆ. ಕೆಲಸ ಇಲ್ಲದೆ ಜನ ಭಾರತಕ್ಕೂ ಒಲಸೆ ಬರುತ್ತಿದ್ದಾರೆ. ಈ ನಡುವೇನೆ ಇಲ್ಲಿಯ ಸರ್ಕಾರ ಈಗ ಪಡಿತರ ರೀತಿಯಲ್ಲಿಯೇ ಪೆಟ್ರೋಲ್ ಮತ್ತು ಡೀಸೆಲ್ ಕೊಡಲು ನಿರ್ಧರಿಸಿದೆ.
ಆರ್ಥಿಕ ಬಿಕಟ್ಟಿನಿಂದ ಕಂಗೆಟ್ಟಿರೋ ಶ್ರೀಲಂಕಾ ಈ ಒಂದು ನಿರ್ಧಾರ ತೆಗೆದುಕೊಂಡಿದ್ದು, ಒಮ್ಮೆ ಬಂಕ್ ಗಳಿಗೆ ಬರೋ ದ್ವಿಚಕ್ರ ವಾಹನಗಳು ಕೇವಲ 1000 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಹೋಗಬೇಕಷ್ಟೇ. ಅದಕ್ಕಿಂತಲೂ ಜಾಸ್ತಿ ಇಲ್ಲಿ ದೊರೆಯೋದೇ ಇಲ್ಲ.
ತ್ರಿಚಕ್ರ ವಾಹನಗಳು 1,500 ರೂಪಾಯಿ, ಕಾರು ಮತ್ತು ಜೀಪುಗಳಿಗೆ ಗರಿಷ್ಠ-5000 ವರೆಗೂ ಮಾತ್ರ ಪೆಟ್ರೋಲ್ ಇಲ್ಲವೇ ಡೀಸೆಲ್ ಹಾಕಿಸಿಕೊಳ್ಳಬೇಕು ಅಂತಲೇ ಶ್ರೀಲಂಕಾ ಸರ್ಕಾರ ಈ ಹೊಸ ನಿಯಮ ಜಾರಿಗೆ ತಂದಿದೆ.
PublicNext
16/04/2022 01:50 pm