ವಿಶ್ವದ ನಂ.1 ಧನಿಕ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ ಅವರು ಇತ್ತೀಚೆಗೆ ಟ್ವಿಟ್ಟರ್ ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಟ್ವಿಟರ್ ಮಾಲೀಕರಾಗ ಬಯಸುವ ಅವರ ಕನಸು ಕನಸಾಗಿಯೇ ಉಳದಿದೆ. ಟ್ವಿಟ್ಟರ್ ನಿರ್ದೇಶಕರ ಮಂಡಳಿಯು ಎಲಾನ್ಮಸ್ಕ್ ಅವರ ಈ ಆಫರ್ಅನ್ನು ಅಧಿಕೃತವಾಗಿ ತಿರಸ್ಕರಿಸಿದೆ. ಅಲ್ಲದೇ, ಟ್ವಿಟ್ಟರ್ ಮೇಲೆ ಅಧಿಕಾರ ಸ್ಥಾಪನೆಯ ವಿರುದ್ಧ ನಿರ್ಬಂಧವಾಗಿ 'ಷೇರುದಾರರ ಹಕ್ಕುಗಳ ಯೋಜನೆ'ಯನ್ನು ರೂಪಿಸಿದೆ.
ವಿಶ್ವದ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಟ್ವಿಟರ್ನಲ್ಲಿ 100 ಪ್ರತಿಶತ ಪಾಲನ್ನು ಖರೀದಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಇದಕ್ಕಾಗಿ ಅವರು ನಗದು ಹಣ ಪಾವತಿಗೆ ಸಿದ್ಧ ಎಂದು ಹೇಳಿದ್ದರು. ಆದರೆ, ಇದೀಗ ಟ್ವಿಟರ್ ಸಂಸ್ಥೆ ಮಸ್ಕ್ ಅವರ ಈ ಆಫರ್ಅನ್ನು ತಿರಸ್ಕರಿಸಿದೆ. ಈ ಬಗ್ಗೆ ಟ್ವಿಟರ್ ನಿರ್ದೇಶಕರ ಮಂಡಳಿಯು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಈ ಮೂಲಕ ಟ್ವಿಟ್ಟರ್ಅನ್ನು ಸ್ವಾಧೀನಪಡಿಸಿಕೊಳ್ಳಲು ಅಪೇಕ್ಷಿಸಿದ, ಕ್ರಮಬದ್ಧವಲ್ಲದ ರೀತಿಯಲ್ಲಿ ಹಕ್ಕುಗಳನ್ನು ಸ್ಥಾಪಿಸಲು ಮುಂದಾದ ಎಲಾನ್ ಮಸ್ಕ್ರ ನಿರ್ಧಾರ ಸಮಂಜಸವಲ್ಲ. ಷೇರುದಾರರ ಹಕ್ಕುಗಳ ರಕ್ಷಣೆ ಯೋಜನೆ ರೂಪಿಸಲಾಗುವುದು ಎಂದು ಅದು ತಿಳಿಸಿದೆ.
PublicNext
16/04/2022 08:34 am