ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಘೋಷಿಸಿದ್ದಾರೆ.
ಗುರುವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ಜೋ ಬೈಡನ್, ಅಮೆರಿಕದಲ್ಲಿರುವ ರಷ್ಯಾದ ಎಲ್ಲಾ ಸ್ವತ್ತುಗಳನ್ನು ಫ್ರೀಜ್ ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದರ ಜೊತೆಗಿನ ರಫ್ತು ನಿಯಮಗಳ ಮೇಲೆ ನಿರ್ಬಂಧ ಮತ್ತು ನಿಯಂತ್ರಣವನ್ನು ಘೋಷಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ರಷ್ಯಾದ ನಾಲ್ಕು ಪ್ರಮುಖ ಬ್ಯಾಂಕುಗಳ ಮೇಲೆ ನಿರ್ಬಂಧವನ್ನು ವಿಧಿಸಿದೆ. ಇದರ ಅರ್ಥ ಅಮೆರಿಕದಲ್ಲಿ ಇರುವ ರಷ್ಯಾದ ಎಲ್ಲಾ ಸ್ವತ್ತುಗಳನ್ನು ಫ್ರೀಜ್ ಮಾಡುವುದೇ ಆಗಿದೆ. ಅದರ ಭಾಗವಾಗಿ ರಷ್ಯಾದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿರುವ ವಿಟಿಬಿಯನ್ನು ನಿರ್ಬಂಧಿಸಲಾಗಿದೆ" ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
PublicNext
25/02/2022 08:50 am