ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಕಂಪನಿ ಮಹಿಳೆಯರ ಕ್ಷಮೆ ಕೇಳಿದೆ. ಅಡುಗೆ ಮನೆಯ ಉಪಕರಣಗಳ ಮಾರಾಟದ ಜಾಹೀರಾತಿನ ಸಂದೇಶವನ್ನು ಕಂಪನಿಯು ಕಳುಹಿಸಿತ್ತು. ಇದರ ವಿರುದ್ಧ ಮಹಿಳೆಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಇಷ್ಟೊಂದು ಮುಂದುವರೆದಿದ್ದರೂ ಫ್ಲಿಪ್‌ಕಾರ್ಟ್ ಮಾತ್ರ ಎಂದಿನಂತೆಯೇ ಮಹಿಳೆಯರನ್ನು ಅಡುಗೆ ಮನೆಗೆ ಮೀಸಲಿಟ್ಟಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಕಿಚನ್ ಅಪ್ಲಯನ್ಸ್‌ನ ಆಫರ್ ನೀಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ.
ಫ್ಲಿಪ್‌ಕಾರ್ಟ್ ಮಾರ್ಚ್ 7 ರಂದು ಅಡುಗೆ ಸಲಕರಣೆಗಳನ್ನು ಉತ್ತೇಜಿಸುವ ಮಹಿಳಾ ದಿನದ ಸಂದೇಶವನ್ನು ಕಳುಹಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾದ ನಂತರ ದೇಶದ ಬೃಹತ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಫ್ಲಿಪ್‌ಕಾರ್ಟ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದೆ, 'ನಾವು ಗೊಂದಲಕ್ಕೀಡಾಗಿದ್ದೇವೆ ಮತ್ತು ನಮ್ಮನ್ನು ಕ್ಷಮಿಸಿ' ನಾವು ಯಾರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಫ್ಲಿಪ್‌ಕಾರ್ಟ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವಿಟ್ ಮಾಡಿದೆ.
PublicNext
09/03/2022 10:39 pm