ನವದೆಹಲಿ: ಆನ್‌ಲೈನ್ ಮೂಲಕ ಆಹಾರ ಡೆಲಿವರಿ ಮಾಡುವ ಝೊಮ್ಯಾಟೊ, ಸ್ವಿಗ್ಗಿಯಂತಹ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆಯೊಂದನ್ನು ಕೊಟ್ಟಿದೆ.
ಗ್ರಾಹಕರಿಂದ ಬರುವ ದೂರುಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತೀರಿ? ಮತ್ತು ಗ್ರಾಹಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವ ವ್ಯವಸ್ಥೆಯನ್ನು ಹೇಗೆ ರೂಪಿಸಿಕೊಂಡಿದ್ದೀರಿ? ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಕೇಂದ್ರ ಸರ್ಕಾರ ಸೂಚಿಸಿದೆ.
ಒಂದು ವರ್ಷದ ಅವಧಿಯಲ್ಲಿ ಸ್ವಿಗ್ಗಿ ವಿರುದ್ಧ ಗ್ರಾಹಕರಿಂದ 3,631 ದೂರುಗಳು ಸ್ವೀಕೃತವಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹೇಳಿದೆ. ಹೀಗಾಗಿ ಇಲಾಖೆಯು ಸಮಸ್ಯೆಗಳ ಇತ್ಯರ್ಥಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥೆ ಬಗ್ಗೆ 15 ದಿನಗಳ ಒಳಗಾಗಿ ಪ್ರಸ್ತಾವ ಸಲ್ಲಿಸಲು ಸೂಚಿಸಿದೆ.
PublicNext
14/06/2022 06:34 pm