ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾದಿಯಲ್ಲೇ ಅಡುಗೆ ಅನಿಲವು ಭಾರೀ ಏರಿಕೆ ಕಾಣುತ್ತಿದೆ. ಮಾರ್ಚ್ ಮೊದಲ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಮತ್ತೆ 25 ರೂಪಾಯಿ ಏರಿಕೆ. ಪರಿಣಾಮ 797 ರೂಪಾಯಿ ಇದ್ದ ದರ ಇದೀಗ 822 ರೂ.ಗೆ ಏರಿಕೆಯಾಗಿದೆ.
ಇತ್ತ ಕಮರ್ಷಿಯಲ್ ಸಿಲಿಂಡರ್ ದರ 96 ರೂಪಾಯಿ ಏರಿಕೆಯಾಗಿದ್ದು, ಇದೀಗ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 1,666 ರೂಪಾಯಿ. ಇದರಿಂದ ಈಗ ಹೊಟೇಲ್ ಉದ್ಯಮಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.
PublicNext
01/03/2021 11:31 am