ಪಟನಾ: ಕೆಲವೊಂದು ಸಂದರ್ಭಗಳಲ್ಲಿ ಯಾರಿಗೋ ಹಾಕಬೇಕಾದ ಹಣ ಮತ್ಯಾರಿಗೂ ಹೋಗಿಬಿಟ್ಟಿರುತ್ತದೆ. ಅಚಾನಕ್ಕಾಗಿ ಇಂತಹ ಘಟನೆಗಳು ನಡೆದಿರುವುದನ್ನು ನಾವು ನೀವೆಲ್ಲಾ ಕೇಳಿದ್ದೇವೆ. ಆದರೆ ಇಲ್ಲಿ ಮಕ್ಕಳಿಬ್ಬರ ಖಾತೆಗೆ ಬರೋಬ್ಬರಿ 900 ಕೋಟಿ ರೂ. ಜಮಾ ಆಗಿದೆ.
ಇಂತಹವೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಕತಿಹಾರ್ ಜಿಲ್ಲೆಯ ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಬರೋಬ್ಬರಿ 900 ಕೋಟಿ ರೂಪಾಯಿಗೂ ಅಧಿಕ ಹಣ ಜಮೆ ಆಗಿದೆ. ಮನೆ ಕತಿಹಾರ್ ಬ್ಯಾಂಕಿನಲ್ಲಿ ಈ ಘಟನೆ ನಡೆದಿದೆ. ಈ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ.
ಶಾಲಾ ಸಮವಸ್ತ್ರದ ಹಣವನ್ನು ಸರ್ಕಾರ ಬ್ಯಾಂಕ್ ಖಾತೆಗೆ ಜಮಾ ಮಾಡಿದೆಯೇ ಎಂಬುದನ್ನು ತಿಳಿಯಲು ಇಬ್ಬರು ವಿದ್ಯಾರ್ಥಿಗಳು ಎಸ್ ಬಿಐನ ಸ್ಥಳೀಯ ಸಿಪಿಸಿ (ಸೆಂಟ್ರಲೈಸ್ಡ್ ಪ್ರೊಸೆಸಿಂಗ್ ಸೆಂಟರ್) ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಬ್ಯಾಂಕ್ ಖಾತೆಯ ಹಣವನ್ನು ಪರಿಶೀಲಿಸಿದಾಗ ಇಬ್ಬರ ಖಾತೆಯಲ್ಲಿ ಬರೋಬ್ಬರಿ 900 ಕೋಟಿ ರೂ. ಹಣ ಇರುವುದನ್ನು ನೋಡಿ ಎಲ್ಲರು ಶಾಕ್ ಆಗಿದ್ದಾರೆ.
ವಿದ್ಯಾರ್ಥಿಗಳಾದ ಗುರುಚಂದ್ರ ವಿಶ್ವಾಸ್ ಮತ್ತು ಅಸಿತ್ ಕುಮಾರ್ ಎಂಬುವರ ಖಾತೆಗೆ 900 ಕೋಟಿ ರೂ. ಜಮೆ ಆಗಿದೆ. ಈ ಬೆಳವಣಿಗೆಯಿಂದಾಗಿ ಬ್ಯಾಂಕ್ ಮ್ಯಾನೇಜರ್ ಮನೋಜ್ ಗುಪ್ತಾ ಅವರು ಎರಡೂ ಮಕ್ಕಳ ಖಾತೆಯಿಂದ ಹಣ ಪಾವತಿಯನ್ನು ನಿಲ್ಲಿಸಿದ್ದಾರೆ ಮತ್ತು ಈ ವಿಷಯವು ತನಿಖೆಯಲ್ಲಿದೆ ಎಂದು ತಿಳಿಸಿದ್ದಾರೆ.
PublicNext
16/09/2021 04:03 pm