ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಗುರುವಾರವೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿವೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 17 ಪೈಸೆ ಹಾಗೂ ಡೀಸೆಲ್ ದರ 21 ಪೈಸೆ ಹೆಚ್ಚಿಸಿವೆ.
ಇದರಿಂದ ಚಿಲ್ಲರೆ ಮಾರಾಟ ದರ ಪೆಟ್ರೋಲ್ ₹ 85.41 ಹಾಗೂ ಡೀಸೆಲ್ ₹ 77.22ಕ್ಕೆ ತಲುಪಿದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 17 ಪೈಸೆ ಹೆಚ್ಚಾಗಿ ₹ 89.33ಕ್ಕೆ ಹಾಗೂ ಡೀಸೆಲ್ ದರ 20 ಪೈಸೆ ಹೆಚ್ಚಾಗಿ ₹ 79.42ಕ್ಕೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹ 82.49 ರಿಂದ ₹ 82.66ಕ್ಕೆ ಹಾಗೂ ಡೀಸೆಲ್ ದರ ₹ 72.65 ರಿಂದ ₹ 72.84ಕ್ಕೆ ಏರಿಕೆ ಆಗಿದೆ.
PublicNext
03/12/2020 07:09 pm