ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧೋನಿ ಅಷ್ಟೇ ಅಲ್ಲ: ಕಪ್ಪು ಕೋಳಿಯನ್ನು ನೀವೂ ಸಾಕಬಹುದು

ಬೆಂಗಳೂರು: ಇತ್ತೀಚೆಗೆ ಖಡಕ್‌ನಾಥ್‌ ಕೋಳಿ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಅದಕ್ಕೆ ಕಾರಣ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಅವರು ಇದರ ಸಾಕಾಣಿಕೆ ಶುರು ಮಾಡಲಿದ್ದಾರೆಂಬ ಸುದ್ದಿ ಹಬ್ಬಿತ್ತು.

ಆದರೆ ಅದೇನೆ ಇದ್ದರೂ ಸದ್ಯ ದೇಶದೆಲ್ಲೆಡೆ ಖಡಕ್‌ನಾಥ್‌ ಕೋಳಿಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಧೋನಿ ಆರಂಭಿಸಲು ಉದ್ದೇಶಿಸಿರುವ ಕಪ್ಪು ಕೋಳಿ ಸಾಕಣೆ ಹೇಗೆ? ಇದರಿಂದ ಭಾರಿ ಲಾಭವಾಗುತ್ತಾ? ಸ್ವ ಉದ್ಯೋಗ ನಡೆಸಿದರೆ ಹೇಗೆ ಎಂಬ ಚರ್ಚೆಗಳು ಆರಂಭವಾಗಿದೆ. ಧೋನಿ ಅಷ್ಟೇ ಯಾಕೆ? ನೀವೂ ಕೂಡ ಕಪ್ಪು ಕೋಳಿ ಸಾಕಿ ಉತ್ತಮ ಆದಾಯ ಗಳಿಸಬಹುದು

ಕಪ್ಪು ಕೋಳಿ ಸಾಕಾಣಿಕೆ ಹೇಗೆ?

ಈ ಕೋಳಿಗಳನ್ನು ಸಲುಭವಾಗಿ ಸಾಕಬಹುದು ಎನ್ನುತ್ತಾರೆ ಕುಕ್ಕುಟೋದ್ಯಮ ನಡೆಸುವವರು. ಯಾಕೆಂದರೆ ಆರಂಭದಲ್ಲಿ ಎಳೆಯ ಮರಿಗಳಿಗೆ ಮಾತ್ರ ಖಾಸಗಿ ಸಂಸ್ಥೆಗಳು ನೀಡುವ ಸಿದ್ಧಾಹಾರವನ್ನು ನೀಡಬೇಕಾಗುತ್ತದೆ. ನಂತರ ಬೆಳೆದರೆ ಸಿದ್ದ ಆಹಾರಗಳ ಅಗತ್ಯವಿರುವುದಿಲ್ಲ. ನಂತರ ಗುಣಮಟ್ಟದ ಗೋಧಿ, ರಾಗಿ, ಜೋಳ ಇತ್ಯಾದಿಗಳನ್ನು ಮಿಕ್ಸ್ ಮಾಡಿ ಸಂಜೆ ಹೊತ್ತು ಮಾತ್ರ ಈ ಕೋಳಿಗಳಿಗೆ ನೀಡಲಾಗುತ್ತದೆ. ಕಡಿಮೆ ಬೆಲೆಗೆ ಸಿಗುವ ರೇಷ್ಮೆ ಎಲೆಗಳ ಪೌಡರ್‌ನ್ನು ಈ ಕೋಳಿಗಳಿಗೆ ಆಹಾರವಾಗಿ ನೀಡುತ್ತಾರೆ. ಸಾಮಾನ್ಯ ನಾಟಿ ಕೋಳಿಗಳಂತೆ ಇವುಗಳು ಹೊಲದಲ್ಲಿರುವ ಹುಳ ಹುಪ್ಪಟೆ ತಿನ್ನುತ್ತವೆ. ಇನ್ನು ಎಲ್ಲಾ ಹವಾಮಾನಗಳಲ್ಲಿಯು ಇವು ಹೊಂದಿಕೊಂಡು ಜೀವಿಸುತ್ತವೆ. ಹೀಗಾಗಿ 100 ಮರಿಗಳ ಸಾಕಣೆಗೆ 150 ಸ್ಕ್ವೇರ್ ಫೀಟ್ ಜಾಗ ಸಾಕಗುತ್ತದೆ. ಉತ್ತಮ ನೀರು ಹಾಗೂ ವಿದ್ಯುತ್‌ನ ಸಂಪರ್ಕವಿದ್ದರೆ ಇನ್ನು ಅತ್ಯುತ್ತಮ. ನಾಟಿ ಕೋಳಿ ಸಾಕಿದವರಿಗೆ ಈ ಕಪ್ಪು ಕೋಳಿಗಳ ಸಾಕಾಣೆ ಸುಲಭವಾಗಿರುತ್ತದೆ.

Edited By : Nagaraj Tulugeri
PublicNext

PublicNext

27/11/2020 12:56 pm

Cinque Terre

74.44 K

Cinque Terre

1

ಸಂಬಂಧಿತ ಸುದ್ದಿ