ಬೆಂಗಳೂರು-ಹೆಚ್ಚು ಕಡಿಮೆ ₹100ರ ಗಡಿ ದಾಟಿದ್ದ ಈರುಳ್ಳಿ ಬೆಲೆ ಈಗ ₹60ರ ಆಸುಪಾಸಿಗೆ ಬಂದು ನಿಂತಿದೆ.
ಇದಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮವೂ ಒಂದು ಕಾರಣ ಎನ್ನಬಹುದು. ದಾಸ್ತಾನಿನಲ್ಲಿರುವ ಈರುಳ್ಳಿಯನ್ನು ಕೇಂದ್ರ ಸರ್ಕಾರ ಅತ್ಯಂತ ಕಡಿಮೆ ಬೆಲೆಗೆ ನೀಡಲು ಮುಂದಾಗಿದೆ. ಜೊತೆಗೆ ಚಿಲ್ಲರೆ ಮತ್ತು ಸಗಟು ಮಾರಾಟಗಾರರಿಗೆ ಡಿ.31ರವರೆಗೆ ದಾಸ್ತಾನು ಮಿತಿ ಹೇರಿರುವುದೂ ಕೂಡ ಬೆಲೆ ಕಂಟ್ರೋಲ್ ಆಗಲು ಕಾರಣ ಎನ್ನಲಾಗುತ್ತಿದೆ.
ಸದ್ಯದರಲ್ಲೇ ಮಹಾರಾಷ್ಟ್ರ, ಕರ್ನಾಟಕ ಹಾಗೂ ಇತರ ಭಾಗಗಳಿಂದ ಈರುಳ್ಳಿ ಬರಲಿದೆ. ಹೀಗಾಗಿ ಗೋದಾಮಿನಲ್ಲಿ ಸಂಗ್ರಹಿತವಾಗಿದ್ದ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡಲಾಗಿದೆ.
ಈಗ ಮಹಾನಗರದ ಮಾರುಕಟ್ಟೆಗಳಲ್ಲಿ ಉತ್ತಮ ದರ್ಜೆಯ ಈರುಳ್ಳಿ ಪ್ರತಿ ಕೆಜಿಗೆ ₹60ರಿಂದ ₹70 ಹಾಗೂ ಮಧ್ಯಮ ಗುಣಮಟ್ಟದ ಈರುಳ್ಳಿ ₹50ರಿಂದ ₹60ಕ್ಕೆ ಮಾರಾಟವಾಗುತ್ತಿದೆ.
PublicNext
25/10/2020 09:32 am