ವಿಜಯಪುರ: ಭವಿಷ್ಯದ ಜಿಲ್ಲಾ ಕೇಂದ್ರ ಎಂದೇ ಬಿಂಬಿತಗೊಂಡಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹೃದಯ ಭಾಗದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಸದ್ಯ ಇದು ಅವ್ಯವಸ್ಥೆಯ ಆಗರವಾಗಿದೆ. ಈ ನಿಲ್ದಾಣದಿಂದ ಉತ್ತರ ಕರ್ನಾಟಕದ ಕೊನೆಯ ಭಾಗದಿಂದ ಹಿಡಿದು ಮಹಾರಾಷ್ಟ್ರದ ಮುಂಬೈವರೆಗೂ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ. ದಿನ ನಿತ್ಯ ಸಾವಿರಾರು ಪ್ರಯಾಣಿಕರು ಈ ಬಸ್ ನಿಲ್ದಾಣದಿಂದ ಬೇರೆ ಬೇರೆ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಆದರೆ ಪ್ರಯಾಣಿಕರು ಪ್ರತಿಕ್ಷಣವೂ ಅನುಭವಿಸುವ ಕಷ್ಟ ಯಾರಿಗೆ ಹೇಳೋದು ಅಂತ ಭಯದಲ್ಲೇ ಮೌನ ಮುರಿದಿದ್ದಾರೆ.
ಈ ಬಸ್ ನಿಲ್ದಾಣಕ್ಕೆ ಬಂದರೆ ಸಾಕು ಡೆಂಗು ಮತ್ತು ಮಲೇರಿಯಾ ಅಂತಹ ಸಾಂಕ್ರಾಮಿಕ ರೋಗ ಹಾಡುವ ಸಾಧ್ಯತೆಗಳಿವೆ ಎಲ್ಲಿ ನೋಡಿದರೂ ಅಲ್ಲಿ ಗಟಾರು ನೀರು ಯಾವಾ ಗೋಡೆ ಮೇಲೆ ನೋಡಿದರೂ ಗುಟುಖಾ ಉಗುಳಿದ ಗಲೀಜು. ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆ ಮಾಡಬೇಕು ಎಂದು ಸಾರ್ವಜನಿಕರು ಹಿಡಿಶಾಪ ಹಾಕಿದರು.
PublicNext
25/09/2022 04:07 pm