ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಬಿಸಿಲುನಾಡಿನಲ್ಲಿ ಫೆಂಗಲ್ ದಂಗಲ್ - ಥಂಡಾ ಥಂಡಾ ಕೂಲ್ ಕೂಲ್, ಆತಂಕದಲ್ಲಿ ಅನ್ನದಾತ

ವಿಜಯಪುರ: ಬಿಸಿಲುನಾಡು ಎಂದು ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆ ಇದೀಗ‌ ಮಿನಿ ಕಾಶ್ಮೀರದ ಅನುಭವ ನೀಡುತ್ತಿದೆ. ಕಳೆದ ಕೆಲ ದಿನಗಳಿಂದಲೂ ನಿರಂತರವಾಗಿ ಮೋಡ ಮುಸುಕಿದ ವಾತಾವರಣ, ದಟ್ಟವಾದ ಮಂಜು ಮತ್ತು ತಣ್ಣನೆಯ ಜೋರು ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಜನರು ಚಳಿಗೆ ನಡುಗುವಂತಾಗಿದೆ.

ಹೌದು! ಫೆಂಗಲ್ ಚಂಡಮಾರುತದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದ ಪ್ರಭಾವವು ವಿಜಯಪುರ ಜಿಲ್ಲೆಯ ಮೇಲೂ ಬಿದ್ದಿದ್ದು ಬೆಚ್ಚಗೆ ಇರಲು ಹೆಚ್ಚಿನ ಜನರು ಟೋಪಿ, ಸೈಟರ್, ಜರ್ಕಿನ್‌ಗಳ ಮೊರೆ ಹೋಗಿದ್ದಾರೆ. ಬಂಗಾಲಕೊಲ್ಲಿಯಲ್ಲಿ ವಾಯಭಾರ ಕುಸಿತದಿಂದ ಎರಡು ದಿನಗಳ ಅಲ್ಲಲ್ಲಿ ಮಳೆ ಸುರಿಯುತ್ತಿದ್ದರೆ, ಬಹುತೇಕ ಕಡೆ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದೆ.

ಅದರಂತೆ ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದೆ. ಇದರ ನಡುವೆ ಬೆಳಿಗ್ಗೆ ಮತ್ತು ಸಂಜೆ ಮಂಜು ಆವರಿಸುತ್ತಿದ್ದು ಮತ್ತೊಂದೆಡೆ ಬದಲಾದ ವಾತಾವರಣದಿಂದ ಜನರು ಹೊರಗೆ ಬರಲು ವಾಕಿಂಗ್ ಗೆ ಹೋಗಲು ಹೆದುರುವಂತಾಗಿದೆ.

ಎಲ್ಲಿ ಹೋದ್ರೂ ಬೆಚ್ಚನೆಯ ಬಟ್ಟೆ ಧರಿಸಿ ಹೋಗುತ್ತಿದ್ದಾರೆ. ವೈದ್ಯರು ಮಾತ್ರ ಈ ಸೀಜನ್ ಅಷ್ಟು ಮಾರಕವಲ್ಲಾ ಇದು ಒಳ್ಳೆಯ ಹೆಲ್ತಿ ಸೀಜನ್ ಎನ್ನುತ್ತಿದ್ದಾರೆ.

ಇನ್ನೂ ಕಳೆದ ಎರಡ ಮೂರು ದಿನಗಳ ಹಿಂದೆ ಬಂಗಾಳ ಕೊಲ್ಲಿಯಲ್ಲಿ ಎದ್ದಿದ್ದ ಫೆಂಗಲ್ ಚಂಡಮಾರುತ ವಿಜಯಪುರ ಜಿಲ್ಲೆಯ ಬೆಳೆಗಳನ್ನು ಹಾಳು ಮಾಡುತ್ತಿದೆ. ಶೀತಗಾಳಿ ಬೀಸುತ್ತಿರುವ ಪರಿಣಾಮ ಚಳಿಯಿಂದ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿರುವ ಜೋಳ, ತೊಗರಿ, ದ್ರಾಕ್ಷಿ, ದಾಳಿಂಬೆ ಬೆಳೆಗಳಿಗೆ ಈ ಶೀತಗಾಳಿ ಮತ್ತು ಮಳೆ ಆತಂಕ ತಂದೊಡ್ಡಿದೆ. ತುಂತುರು ಮಳೆ, ಭಾರೀ ಗಾಳಿ ಮತ್ತು ಶೀತದಿಂದಾಗಿ ತೊಗರಿ,ದ್ರಾಕ್ಷಿ ನೆಲಕಚ್ಚುವ ಆತಂಕ ಎದುರಾಗಿದೆ.

ಒಟ್ನಲ್ಲಿ ಜಿಲ್ಲೆಯಲ್ಲಿ ಫೆಂಗಲ್‌ನ ದಂಗಲ್ ಜೊತೆಗೆ ಚಳಿಯು ಥಂಡಾ ಥಂಡಾ ಕೂಲ್ ಅನುಭವ ನೀಡುತ್ತಿದೆ. ಡಿಸೆಂಬರ್ ತಿಂಗಳ ಕೊನೆಯಲ್ಲಿ ಇನ್ನೂ ಚಳಿ ಹೆಚ್ಚಾಗುವ ಸಾಧ್ಯತೆ ಇದೆ‌ ಎನ್ನಲಾಗಿದೆ.

ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ

Edited By : Somashekar
PublicNext

PublicNext

05/12/2024 02:06 pm

Cinque Terre

20.26 K

Cinque Terre

0