", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1737363736-mm.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ : ಹಬ್ಬಕ್ಕೆ ಊರಿಗೆ ಹೋಗಿ ವಾಪಸ್ ಬರೋದು ವಿಳಂಬವಾಗಿದೆ ಎಂಬ ಕಾರಣಕ್ಕೆ ಇಟ್ಟಿಗೆ ಬಟ್ಟಿ ಮಾಲೀಕ ಕಾರ್ಮಿಕರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾ...Read more" } ", "keywords": "Vijayapura, Labourers Attacked, Fatal Assault, Inhumane Incident, Karnataka News, Labour Law Violation, Worker Safety, Crime Against Labourers, Vijayapura Police. ,Bijapur,Crime,Law-and-Order", "url": "https://publicnext.com/article/nid/Bijapur/Crime/Law-and-Order" } ವಿಜಯಪುರ: ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ - ಇದು ಅಮಾನವೀಯ ಘಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ - ಇದು ಅಮಾನವೀಯ ಘಟನೆ

ವಿಜಯಪುರ : ಹಬ್ಬಕ್ಕೆ ಊರಿಗೆ ಹೋಗಿ ವಾಪಸ್ ಬರೋದು ವಿಳಂಬವಾಗಿದೆ ಎಂಬ ಕಾರಣಕ್ಕೆ ಇಟ್ಟಿಗೆ ಬಟ್ಟಿ ಮಾಲೀಕ ಕಾರ್ಮಿಕರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಈ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಇಟ್ಟಂಗಿ ಭಟ್ಟಿ ಮಾಲೀಕ ಖೇಮು ರಾಠೋಡ ಕಡೆಯಿಂದ ಅಡ್ವಾನ್ಸ್‌ ಪಡೆದ ಕಾರ್ಮಿಕರು ಹಬ್ಬಕ್ಕೆಂದು ಊರಿಗೆ ಹೋಗಿದ್ದರು. ಆದ್ರೆ ವಾಪಸ್ ಬರೋದು ವಿಳಂಬವಾಗಿದೆ ಎಂದು ಇಟ್ಟಿಗೆ ಬಟ್ಟಿ ಮಾಲೀಕ ಮೂವರು ಕಾರ್ಮಿಕರ ಅಂಗಾಲಿಗೆ ಪೈಪ್‌ನಿಂದಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ.

ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಾರ್ಮಿಕರ ಮೇಲೆ ನಡೆದ ಅಮಾನುಷ ದೌರ್ಜನ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ವಿಡಿಯೋದಲ್ಲಿ ಕಾರ್ಮಿಕರು ತಮ್ಮನ್ನು ಹೊಡೆಯಬೇಡಿ ಎಂದು ಅಂಗಲಾಚುವ ದೃಶ್ಯ ಕರಳು ಹಿಂಡುವಂತಿದೆ.

ಹಲ್ಲೆಗೊಳಗಾದ ಕಾರ್ಮಿಕರನ್ನ ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದ ಸದಾಶಿವ ಮಾದರ್, ಸದಾಶಿವ ಬಬಲಾದಿ, ಉಮೇಶ ಮಾದರ್ ಎಂದು ಗುರುತಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಮಂಜು ಕಲಾಲ್, ಪಬ್ಲಿಕ ನೆಕ್ಸ್ಟ್‌ ವಿಜಯಪುರ

Edited By : Ashok M
PublicNext

PublicNext

20/01/2025 02:32 pm

Cinque Terre

49.05 K

Cinque Terre

21