", "articleSection": "Crime,Law and Order,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737189070-V6~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಳ್ಳಾರಿ: ಬಳ್ಳಾರಿಯಲ್ಲಿ ಗಣಿ ಧೂಳಿನ ಜೊತೆಗೆ ಅಂದರ್ ಬಾಹರ್, ಇಸ್ಪೀಟ್, ರಿಯಲ್ ಎಸ್ಟೇಟ್ ಕೂಡ ಅಷ್ಟೇ ಸದ್ದು ಮಾಡುತ್ತಿದೆ. ಆಂಧ್ರ ಪ್ರದೇಶ ಗಡಿಯ...Read more" } ", "keywords": "Ballari, SP Shobharani warning, police warning, Andar Bahar, Ispeet Band, Karnataka news, Ballari police, illegal activities, gambling.,Bellary,Crime,Law-and-Order,News,Public-News", "url": "https://publicnext.com/article/nid/Bellary/Crime/Law-and-Order/News/Public-News" }
ಬಳ್ಳಾರಿ: ಬಳ್ಳಾರಿಯಲ್ಲಿ ಗಣಿ ಧೂಳಿನ ಜೊತೆಗೆ ಅಂದರ್ ಬಾಹರ್, ಇಸ್ಪೀಟ್, ರಿಯಲ್ ಎಸ್ಟೇಟ್ ಕೂಡ ಅಷ್ಟೇ ಸದ್ದು ಮಾಡುತ್ತಿದೆ. ಆಂಧ್ರ ಪ್ರದೇಶ ಗಡಿಯಾಗಿರೋದ್ರಿಂದ ಇಸ್ಪೀಟ್ ಅಡ್ಡೆ, ಕ್ಲಬ್‌ಗಳಿಗೇನು ಇಲ್ಲಿ ಕಡಿಮೆ ಇಲ್ಲ. ಇದೇ ಬಳ್ಳಾರಿಯಲ್ಲಿ ಕೆಲ ಅಧಿಕಾರಿಗಳ ಕೃಪಾಕಟಾಕ್ಷಿದಿಂದ ಕೆಲ ಪ್ರಭಾವಿಗಳು ಇಸ್ಪೀಟ್ ಅಡ್ಡೆಯನ್ನ ಅವ್ಯಾಹಯವಾಗಿ ನಡೆಸುತ್ತಿದ್ರು. ಈ ವಿಚಾರವಾಗಿ ಇಲ್ಲಿನ ಎಸ್ಪಿ ಡಾ. ಶೋಭಾರಾಣಿ ಗಮನಕ್ಕೂ ಅನೇಕ ಸಾರ್ವಜನಿಕರು ದೂರು ನೀಡಿದ್ದರು. ದೂರು ಬಂದ ಕ್ಷಣದಲ್ಲೆ ಅಲರ್ಟ್ ಆದ ಎಸ್ಪಿ ಶೋಭಾರಾಣಿ ಖದ್ದು ತಾವೇ ಫೀಲ್ಡಿಗ್‌ಗೆ ಇಳಿದು ಹಲವು ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿ ಹಲವರನ್ನ ಬಂಧಿಸಿದ್ದಾರೆ.
ಬಳ್ಳಾರಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡ್ತಿರೋ ಕೆಲ ಹಿರಿಯ ಅಧಿಕಾರಿಗಳ ಈ ಭ್ರಷ್ಟರ ಬೆನ್ನಿಗೆ ನಿಂತಿದ್ದಾರೆ ಅನ್ನೋ ಆರೋಪ ಕೂಡಿದೆ. ಇದೇ ಕಾರಣಕ್ಕೆ ಇನ್ನೂ ಮುಂದೆ ಬಳ್ಳಾರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ನಡೆದರೆ ಅದಕ್ಕೆ ಸ್ಥಳೀಯ ಅಧಿಕಾರಿಗಳ ಹೊಣೆಯಾಗಲಿದ್ದಾರೆ ಅನ್ನೋ ಖಡಕ್ ವಾರ್ನಿಂಗ್ ಕೂಡ ಮಾಡಿದ್ದಾರಂತೆ. ಕೇವಲ ಇಸ್ಪೀಟ್ ಅಷ್ಟೇ ಅಲ್ಲದೆ ರಿಯಲ್ ಎಸ್ಟೇಟ್, ರೌಡಿಸಂ, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆ ಬಂದ್ ಆಗುವಂತೆ ಕೂಡ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಅಷ್ಟೇ ಅಲ್ಲದೆ ಕೆಲ ಪ್ರಭಾವಿಗಳು ಅಧಿಕಾರಿಗಳ ಜೊತೆಗೆ ಶಾಮೀಲಾಗಿದೆ. ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಮಾಡ್ತಿರೋ ಬಗ್ಗೆ ಎಸ್ಪಿ ಶೋಭಾರಣಿ ಗಮನಕ್ಕೆ ಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ವಿಶೇಷ ತಂಡ ರಚನೆ ಮಾಡಿ ಈ ಕಾಳಸಂತೆಯ ಅನ್ನಗಳ್ಳರ ಪತ್ತೆಗೂ ಮುಂದಾಗಿದ್ದಾರೆ.
Kshetra Samachara
18/01/2025 02:01 pm