ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ನೋಡಗರಿಗೆ ರೋಮಾಂಚನ ನೀಡಿದ ಟಗರು ಕಾಳಗ

ಬೈಲಹೊಂಗಲ: ರಂಗೇರಿರುವ ಅಖಾಡ ಆ ಅಖಾಡದಲ್ಲಿ ಗೆಲವು ನಂದೇ ಅಂತ ಗುದ್ದಾಡುತ್ತಿರುವ ಟಗರುಗಳು, ಡಿಕ್ಕಿ ಹೊಡೆಯುತ್ತಾ ಎದುರಾಳಿಯನ್ನು ಮಣ್ಣು ಮುಕ್ಕಿಸಲು ಹೋರಾಟ, ಕೊಬ್ಬಿದ ಟಗರುಗಳ ಅಬ್ಬರದ ಕಾಳಗ ಕಂಡು ಸಿಳ್ಳೇ, ಕೇಕೆ ಹಾಕಿ ಸಂಭ್ರಮಿಸುತ್ತಿರುವ ಪ್ರೇಕ್ಷಕರು...

ಈ ಎಲ್ಲ ರೋಚಕ ದೃಶ್ಯಗಳು ಕಂಡು ಬಂದಿದ್ದು ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿದ್ದ ಬಸವ ಸರ್ಕಲ ಗೆಳೆಯರ ಬಳಗ ಹಾಗೂ ಜಗದೀಶ ಮೆಟಗುಡ್ಡ ಅಭಿಮಾನಿ ಬಳಗದ ವತಿಯಿಂದ ಪ್ರಪ್ರಥಮ ಬಾರಿಗೆ ನಡೆದ ಜಿದ್ದಾ ಜಿದ್ದಿನ ಟಗರಿನ ಕಾಳಗದಲ್ಲಿ ಕಂಡು ಬಂದ ದೃಶ್ಯಗಳಿವು. ಇನ್ನು ಈ ಟಗರಿನ ಕಾಳಗವನ್ನು ಹೊನಲು ಬೆಳಕಿನಲ್ಲಿ ಆಯೋಜಿಸಿದ್ದು ಕೂಡಾ ವಿಶೇಷವಾಗಿತ್ತು.

ಟಗರಿನ ಕಾಳಗದ ವೇಳೆ ಮೈದಾನದ ಸುತ್ತಲೂ ಲೈಟಿಂಗ್‍ನಲ್ಲಿ ನಡೆದ ರೋಚಕ ಗುದ್ದಾಟ ನೋಡುಗರ ದಿಲ್ ಖುಷ್ ಮಾಡಿದವು. ಬಲಭೀಮರಂತೆ ದಷ್ಟಪುಷ್ಟವಾಗಿ ಸೊಕ್ಕಿನಿಂದ ಕೊಬ್ಬಿದ ಟಗರುಗಳ ಕಾಳಗ ಜಗಜಟ್ಟಿಗಳ ಸೆಣಸಾಟವನ್ನು ನೆನಪಿಸುವಂತಿತ್ತು.

ಕಾಳಗ ವಿಕ್ಷಿಸಲು ಯುವಕರು,ರೈತರು ಆಗಮಿಸಿ ಎಂಜಾಯ್ ಮಾಡುತ್ತಿವ ದೃಶ್ಯಗಳು ಟಗರು ಕಾಳಗಕ್ಕೆ ಇನ್ನಷ್ಟು ಮೆರಗು ತಂದುಕೊಟ್ಟವು.ಪುರಸಭೆ ಸದಸ್ಯ ಗುರು ಮೆಟಗುಡ್ಡ ಟಗರಿನ ಕಾಳಗಕ್ಕೆ ಚಾಲನೆ ನೀಡಿದರು.ಕಾಳಗದಲ್ಲಿ ಒಪನ ಟಗರು, ಎರಡು ಹಲ್ಲಿನ ಟಗರು, ಹಾಲು ಹಲ್ಲಿನ ಟಗರುಗಳು ಸೇರಿದಂತೆ 90 ಕ್ಕೂ ಹೆಚ್ಚು ಟಗರುಗಳು ಕಾಳಗದಲ್ಲಿ ಭಾಗವಹಿಸಿದ್ದವು. ಸುಮಾರು 3 ಸಾವಿರಕ್ಕೂ ಹೆಚ್ಚು ನೆರೆದಿದ್ದ ಜನರು ಸ್ಪರ್ಧೆಯನ್ನು ನೋಡಿ ಸಖತ್ ಖುಷಿ ಪಟ್ಟರು.ಕಾಳಗದಲ್ಲಿ ಕುರಿಗಳು ಕಾಲು ಕೆದರಿ ದೂರದಿಂದ ಓಡಿ ಬಂದು ಡಿಚ್ಚಿ ಹೊಡೆಯುತ್ತಿದ್ದರೆ ಪ್ರೆಕ್ಷಕರು ಕೇಕೆ ಹಾಕಿ ಹುರುದುಂಬಿಸುತ್ತಿದ್ದರು.

ಈ ಟಗರು ಕಾಳಗದಲ್ಲಿ ಪಟ್ಟಣದ ಅತ್ತಾರಹುಲಿ ಪ್ರಥಮ, ವಕ್ಕುಂದ ದುರ್ಗಾಪರಮೇಶ್ವರಿ ದ್ವೀತಿಯ , ಕರೇಮ್ಮದೇವಿ ವಕ್ಕುಂದಸಿಂಹ ತೃತಿಯ ಬಹುಮಾನ ಪಡೆದವು..ಎರಡು ಹಲ್ಲಿನ ಕಾಳಗದಲ್ಲಿ ದೇವಲಾಪುರ ಗೌಡ್ರಗೂಳಿ ಪ್ರಥಮ, ಹೊಸೂರ ದ್ವಿತಿಯ, ರೇಣುಕಾದೇವಿ ಪ್ರಸನ್ನ ತೃತಿಯ ಸ್ಥಾನ ಪಡೆದವು.

ಹಾಲ ಹಲ್ಲಿನ ಕಾಳಗದಲ್ಲಿ ದೇವಲಾಪುರ ಗೌಡ್ರ ಗೂಳಿ ಪ್ರಥಮ, ಎಚ್.ಕೆ.ಜಿ.ಎನ್ ದ್ವಿತಿಯ ಸ್ಥಾನ ಗಳಿಸಿದವು.

Edited By : Shivu K
PublicNext

PublicNext

12/10/2022 10:02 am

Cinque Terre

28.1 K

Cinque Terre

1