ಬೈಲಹೊಂಗಲ: ಪಟ್ಟಣದ ಎಸ್.ಜಿ.ವ್ಹಿ. ಪಿಯು ಕಾಲೇಜಿನ ವಿದ್ಯಾರ್ಥಿಗಳು ಗೋವಾದಲ್ಲಿ ನಡೆದ ನ್ಯಾಷನಲ್ ಲೆವೆಲ್ ರೋಪ್ ಸ್ಕಿಪಿಂಗ್ ಚಾಂಪಿಯನ್ ಶಿಪನಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದು ಅಮೇರಿಕಾ ದೇಶದಲ್ಲಿ ನಡೆಯುವ ಅಂತರಾಷ್ರ್ಟೀಯ ರೋಪ್ ಸ್ಕಿಪಿಂಗ್ ಕ್ರೀಡೆಗೆ ಆಯ್ಕೆಯಾಗಿದ್ದಾರೆ.
ಗೋವಾದಲ್ಲಿ ದಿ. 1 ರಿಂದ 3 ವರೆಗೆ ನಡೆದ ಡಬಲ್ ಡಚ್ ಫ್ರೀ ಸ್ಟೈಲ ರೋಪ್ ಸ್ಕಿಪಿಂಗ್ ರಿಲೇದಲ್ಲಿ ಸ್ನೇಹಾ ತುಪ್ಪದ, ಅಕ್ಷತಾ ಸುಂಕದ, ಶ್ವೇತಾ ಮಾಕಿ ಪ್ರಥಮ ಸ್ಥಾನ, ಡಬಲ್ ಅಂಡರ್ ಸ್ಪೀಡ ರೋಪ್ ಸ್ಕಿಪಿಂಗ್ ರಿಲೇದಲ್ಲಿ ಸಾಕ್ಷಿ ಯರಗಟ್ಟಿ, ಸ್ನೇಹಾ ತುಪ್ಪದ , ಶ್ವೇತಾ ಮಾಕಿ ದ್ವೀತಿಯ ಸ್ಥಾನ, ಡಬಲ್ ಡಚ್ ರೋಪ್ ಸ್ಕಿಪಿಂಗ್ ಲ್ಲಿ ಸಾಕ್ಷಿ ಯರಗಟ್ಟಿ ದ್ವಿತಿಯ ಸ್ಥಾನ ಪಡೆದಿದ್ದಾಳೆ.
ವಿಜೇತರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಪ್ರಭು ನೀಲಕಂಠ ಸ್ವಾಮಿಜಿ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Kshetra Samachara
05/12/2024 01:42 pm