ಅಥಣಿ : ತಾಲೂಕಿನ ಅವರಖೋಡ ಗ್ರಾಮದಲ್ಲಿ ಇಸ್ಲಾಂ ಧರ್ಮದ ಯುವಕರಿಂದ ಈದ ಮಿಲಾದುನ್ ನಬಿ ಹಬ್ಬದ ನಿಮಿತ್ಯವಾಗಿ ಸರ್ವಧರ್ಮ ಸಮಾನತೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ವೇದಿಕೆ ಮೇಲೆ ಎಲ್ಲ ಧರ್ಮದವರು ಆಸೀನರಾಗಿ ಮಾದರಿ ಕಾರ್ಯಕ್ರಮವಾಗಿತ್ತು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶಶಿಕಾಂತ ಪಡಸಲಗಿ ಗುರುಜೀ ಮಾತನಾಡಿ ಈ ಜಗತ್ತಿನಲ್ಲಿ ಅನ್ಯಾಯ, ಅಧರ್ಮ, ಭ್ರಷ್ಟಾಚಾರ, ಡಂಬಾಚಾರ, ಹೆಚ್ಚಾಯಿತೊ ಅವಾಗ ಮಾತ್ರ ಈ ಭೂಮಿ ತಲೆಯ ಮೇಲೆ ಮಹಾತ್ಮರು ಹುಟ್ಟಿ ಬಂದರು ಅವರೆ ಪ್ರವಾದಿ ಮಹಮ್ಮದ ಪೈಗಂಬರರು, ಸಂತ ಶಿಶುನಾಳ ಶರೀಫರು ಯಾರ ಮನೆಗೆ ಕಾಲು ಇಟ್ಟಿದ್ದಾರೊ ಅವರು ಈ ದೇಶದ ಶ್ರೀಮಂತರ ಪಟ್ಟಿಯಲ್ಲಿ ಹಲವು ಕುಟುಂಬಗಳಿವೆ ಎಂದು ಹೇಳಿದರು.
ನಂತರ ಜಂಬಗಿಯ ಸುರೇಶ ಮಹಾರಾಜರು ಮಾತನಾಡಿ ಪೈಗಂಬರ ಮತ್ತು ಬಸವಣ್ಣನವರು ಹಾಗೂ ಕನಕದಾಸರನ್ನು ಯಾಕೆ ಮನಃಪೂರ್ವಕವಾಗಿ ನಾವು ನೆನೆಯುತ್ತೆವೆ ಎಂದರೆ ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯಾದರು ಬಲ್ಲಿರಾ ಅಂತ ಎಲ್ಲರೂ ಮನದಟ್ಟು ಮಾಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುಲಾಬಸಾಬ ಮುಲ್ಲಾ, ಇಮಾಮಸಾಬ ಮುಲ್ಲಾ, ನಬಿಸಾಬ ಮುಲ್ಲಾ, ಜಾಹಿರಸಾಬ ಸನದಿ, ಕಮಾಲಸಾಬ ಮುಲ್ಲಾ, ಈರನಗೌಡ ಪಾಟೀಲ್, ಬಿರಪ್ಪ ಲೋಕುರ, ದಶರಥ ಕಾಂಬಳೆ, ಗಣಪತಿ ತಳವಾರ, ಕುಡಚಿಯ ಮೌಲಾನಾ ಗುಲಾಮ ಸಮದಾನಿ ಸೇರಿದಂತೆ ಇತರರು ಭಾಗಿಯಾಗಿದ್ದರು.
Kshetra Samachara
10/10/2022 11:40 am