ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಈ ದೇವರ ಆವರಣದಲ್ಲಿ ಮದ್ಯ, ಮಾಂಸ ಸೇವಿಸಿ ಹೋದ್ರೆ ಆಪತ್ತು ಗ್ಯಾರಂಟಿ!

ಅಥಣಿ: ಇದು ಮೂಢನಂಬಿಕೆ, ಅಸತ್ಯ. ಬರೀ ಊಹಾಪೋಹ ಅಂದ್ಕೊಂಡು ಯಾರೂ ಕೂಡ ದುಸ್ಸಾಹಸಕ್ಕೆ ಕೈ ಹಾಕ್ಬೇಡಿ. ಯಾಕಂದ್ರೆ  ಈ ದೈವದ ಪವಾಡ ಪರೀಕ್ಷೆಗೆಂದು ಇಳಿದವರು ಬಳಿಕ ನೈಜತೆ ಕಂಡಿದ್ದು ಅಷ್ಟೇ ಸತ್ಯ!

ನೋಡೋಕೆ ಕುಗ್ರಾಮವಾದರೂ ಇಲ್ಲಿಯ ಪವಾಡ ಸದೃಶ್ಯ ದೇವರಿಗೆ ಅಷ್ಟೊಂದು ದೈವೀ ಶಕ್ತಿ ಇರುವುದು ಸತ್ಯ. ಈ ದೇವಸ್ಥಾನದ ಆವರಣದಲ್ಲಿ ಅಪ್ಪಿತಪ್ಪಿ ಮದ್ಯ -ಮಾಂಸ ಸೇವಿಸಿ ಬಂದ್ರೆ ಅವರಿಗೆ ನಾಗರ ಹಾವಿನ ರೂಪದಲ್ಲಿ ಅಡ್ಡಗಟ್ಟಿ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳುವರೆಗೂ ಬಿಡುವುದಿಲ್ಲವಂತೆ ಈ ದೇವರು.

ಹೌದು, ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ವ್ಯಾಪ್ತಿಯ ಕಲ್ಲೂತ್ತಿ ಅನ್ನೋ ಗ್ರಾಮದ ಗ್ರಾಮ ದೇವತೆ ಶ್ರೀ ಪಾಯಲಿಂಗೇಶ್ವರ ದೇವರ ಮಹಿಮೆ ಇದು. ಇಲ್ಲಿ ಇಷ್ಟಾರ್ಥ ಪೂರೈಕೆಗೆಂದು ಬೇಡಿಕೊಂಡವರಿಗೆ ಒಲಿಯುತ್ತಾನೆ ಮಹಾ ಕರುಣಾಮಯಿ. ಆದ್ರೆ, ಈ ದೇವರಿಗೆ ಕೋಪ ಬರುವ ಆ ಕೆಲಸ ಮಾಡಿದ್ರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ ಅಂತಾರೆ ಸ್ಥಳೀಯರು.

ಹತ್ತೂರ ಒಡೆಯ ಎನಿಸಿಕೊಂಡ ದೇವರ ಪವಾಡಕ್ಕೆ ಜನರು ಶರಣು ಎನ್ನುತ್ತಿದ್ದಾರೆ. ತಾವು ಸಾಗೋ ದಾರಿಯಲ್ಲಿ ಅಥವಾ ಮನೆ ಸುತ್ತ-ಮುತ್ತ ಹಾವು ಕಂಡರೆ ಹತ್ತೂರಿನವರು ಈ ದೇವಸ್ಥಾನಕ್ಕೆ ಬಂದು ತೆಂಗಿನ ಕಾಯಿ ಒಡೆದು ಅಲ್ಲಿ ಸಿಗುವ ಮಣ್ಣು ಅಥವಾ ಮರಳು ತಂದು ಮನೆ ಸುತ್ತಮುತ್ತ ಹಾಕಿದ್ರೆ ಹಾವಿನ ಕಾಟ ತಪ್ಪುತ್ತದೆ ಅನ್ನೋ ವಾಡಿಕೆ ಬೆಳೆದುಕೊಂಡು ಬಂದಿದೆ.

ಒಟ್ಟಾರೆ ಹತ್ತೂರ ಕಾಯೋ ವಿಷಕಂಠನ ಮಹಿಮೆಗೆ ಇಲ್ಲಿಯ ಜನ ಅಷ್ಟೇ ಭಕ್ತಿಭಾವದಿಂದ ನಡೆದುಕೊಂಡು, ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ಮಾಡುವ ಮೂಲಕ ಸಂಭ್ರಮಿಸುವುದು ವಿಶೇಷವಾಗಿದೆ.

-ಲಕ್ಷ್ಮಣ ಕೋಳಿ, ಪಬ್ಲಿಕ್ ನೆಕ್ಸ್ಟ್ ಚಿಕ್ಕೋಡಿ

Edited By : Manjunath H D
PublicNext

PublicNext

21/11/2024 09:29 am

Cinque Terre

28.89 K

Cinque Terre

0

ಸಂಬಂಧಿತ ಸುದ್ದಿ