", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/229640-1737291312-bgm2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಈಶ್ವರನ ಆಶೀರ್ವಾದ ಸಿಗಲಿ ಎಂದು ಶಾಂತಿ, ನೆಮ್ಮದಿಯಿಂದ ರಾಜ್ಯದ ಜನತೆಗೆ ಒಳ್ಳೆಯದು ಆಗಲಿ ಅಂತ ಪ್ರಾರ್ಥಿಸಿ 111 ಲೀಟರ್ ಹಾಲಿನಿಂದ ಕ್...Read more" } ", "keywords": "Belagavi, DKShi, Temple, Worship, Faith, Spirituality, Hinduism, Karnataka News, Indian Culture, Religious Significance, Pilgrimage, Tourism.,Belgaum,Politics,Religion", "url": "https://publicnext.com/node" }
ಬೆಳಗಾವಿ: ಈಶ್ವರನ ಆಶೀರ್ವಾದ ಸಿಗಲಿ ಎಂದು ಶಾಂತಿ, ನೆಮ್ಮದಿಯಿಂದ ರಾಜ್ಯದ ಜನತೆಗೆ ಒಳ್ಳೆಯದು ಆಗಲಿ ಅಂತ ಪ್ರಾರ್ಥಿಸಿ 111 ಲೀಟರ್ ಹಾಲಿನಿಂದ ಕ್ಷೀರಾಭಿಷೇಕ ಮಾಡಿದ್ದೇನೆ. ಭಗವಂತನಲ್ಲಿ ಬಹಳ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿದ್ದೇನೆ. ಅದೇ ರೀತಿ ಕಾರ್ಯಕ್ರಮವೂ ಯಶಸ್ವಿಯಾಗಬೇಕು. ರಾಜ್ಯದ ಜನತೆಗೂ ಮತ್ತು ಮಾಧ್ಯಮಗಳಿಗೂ ಒಳ್ಳೆಯದು ಆಗಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಹಿಂದೂ ಧರ್ಮದಲ್ಲಿ ಎಲ್ಲಾ ದೇವರಗಿಂತ ದೊಡ್ಡ ದೇವರು ಪರಮೇಶ್ವರ. ಪರಮೇಶ್ವರನ ಪ್ರತಿರೂಪ ಈಶ್ವರ. ಕಪಿಲೇಶ್ವರ ದೇವಸ್ಥಾನವನ್ನು ದಕ್ಷಿಣ ಕಾಶಿ ಅಂತಾ ಕರೆಯುತ್ತಾರೆ. ಕಾಂಗ್ರೆಸ್ ಅಧಿವೇಶನಕ್ಕೆ ಬಂದ ವೇಳೆ ಮಹಾತ್ಮಾ ಗಾಂಧೀಜಿ ಈ ಕಪಿಲೇಶ್ವರ ದೇವಸ್ಥಾನಕ್ಕೆ ಬಂದಿದ್ದರು.
ಅದೇ ರೀತಿ ಬಾಲಗಂಗಾಧರ ತಿಲಕ್, ಸ್ವಾಮಿ ವಿವೇಕಾನಂದ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಇಲ್ಲಿಗೆ ಬಂದ ಇತಿಹಾಸವಿದೆ. ಹಾಗಾಗಿ, ನಾನು ಬಂದು ಪೂಜೆ ಸಲ್ಲಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.
ನಾನು ಕೂಡ ಈ ಬಾರಿ ಕುಂಭಮೇಳಕ್ಕೆ ಹೋಗುತ್ತಿದ್ದೇನೆ. ಉತ್ತರಪ್ರದೇಶ ಸರ್ಕಾರದ ಹಿರಿಯ ಸಚಿವರು ನನಗೆ ಆಹ್ವಾನಿಸಿದ್ದಾರೆ. ಯಾವುದೇ ಧರ್ಮದವರು ಆಗಲಿ, ಎಲ್ಲರಿಗೂ ಒಂದೊಂದು ನಂಬಿಕೆ ಇರುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
PublicNext
19/01/2025 06:25 pm