ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಆರೋಪಿ‌ ಬಂಧಿಸಲು ಪೋಲಿಸರು ವಿಫಲ, ಆರೋಪ.

ಅಥಣಿ : ತಾಲೂಕಿನ ಕೊಕಟನೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಪ್ರಕರಣ ಮೂರ್ತಿ ಭಗ್ನಗೊಳಿಸಿ ಹಿರೇಹಳ್ಳದಲ್ಲಿ ಎಸೆದ ಘಟನೆ ಘಟಿಸಿ 4 ತಿಂಗಳಾದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸ್ಥಳೀಯ ಹಾಲುಮತ ಸಮುದಾಯದ ಮುಖಂಡ ಮುರೆಪ್ಪ ಬಣಜ ಆರೋಪಿಸಿದರು.

ಅವರು ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಹಾಲುಮತ ಸಮುದಾಯ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಸೇರಿದ ಸಭೆಯಲ್ಲಿ ಅವರು ಮಾತನಾಡುತ್ತಾ ಮೇ 22 ರ ಬೀರಲಿಂಗೇಶ್ವರ ಮೂರ್ತಿಯನ್ನು ವಿರೂಪಗೊಳಿಸಿ ಹತ್ತಿರದ ಹಿರೇಹಳ್ಳದಲ್ಲಿ ಎಸೆದು ಹೋಗಿದ್ದರು, ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಬಹಳ ದಿನ ಕಳೆದರೂ, ಇಲ್ಲಿಯವರೆಗೆ ಆರೋಪಿಗಳನ್ನು ಪತ್ತೆಹಚ್ಚಿಲ್ಲ. ನಮ್ಮ ಭಾವನೆಗಳಿಗೆ ಚ್ಯುತಿ ಬಾರದಂತೆ ಪೊಲೀಸರು ತನಿಖೆ ಕೈಗೊಂಡು ಕೂಡಲೇ ಆರೋಪಿಗಳನ್ನು ಬಂಧಿಸಬೇಕು, ಇಲ್ಲವಾದಲ್ಲಿ ತಾಲೂಕಿನಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ದೇವಸ್ಥಾನ ಕಮಿಟಿ ಅಧ್ಯಕ್ಷ ಶಿವಶಂಕರ ಹಿರೇಕುರಬರ, ಕಾಶಪ್ಪ ಹೂಗಾರ, ಕಾಶಪ್ಪ ಸನದಿ, ಮಾರುತಿ ಯಲಡಗಿ, ಸದಾಶಿವ ಬಣಜ, ಮುರೇಪ್ಪ ಪೂಜಾರಿ, ಮಹಾದೇವ ಬಣಜ, ಸಾಬು ಬಿದರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/09/2022 06:41 pm

Cinque Terre

20.62 K

Cinque Terre

0

ಸಂಬಂಧಿತ ಸುದ್ದಿ