ಬೆಳಗಾವಿ: ನಮ್ಮನ್ನು ಕುಗ್ಗಿಸಲು ಅನೇಕ ಶಕ್ತಿಗಳು ಯೋಜನೆ ರೂಪಿಸಿವೆ, ಎಷ್ಟೇ ಜನರು ಗುಂಪು ಕಟ್ಟಿಕೊಂಡು ಬರಲಿ, ಏನೇನೋ ಭಾಷಣ ಮಾಡಲಿ, ಸತೀಶ ಜಾರಕಿಹೊಳಿ ತಡೆಯೋಕೆ ಯಾರಿಂದಲೂ ಆಗುವುದಿಲ್ಲ ಸತೀಶ ಜಾರಕಿಹೊಳಿ ಅವರ ಬೆನ್ನಿಗೆ ನಾವೆಲ್ಲರೂ ನಿಲ್ಲಬೇಕಿದೆ ಎಂದು ತಂದೆಯ ರಾಜಕೀಯ ವಿರೋಧಿಗಳಿಗೆ ರಾಹುಲ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯ ಕೆಪಿಟಿಸಿಎಲ್ ಹಾಲ್ ನಲ್ಲಿ ಆಯೋಜನೆ ಮಾಡಲಾಗಿದ್ದ ತನ್ನ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ ರಾಹುಲ್ ಜಾರಕಿಹೊಳಿ ಅವರು, ನಾನು ತಂದೆ ಸತೀಶ್ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ, ಕಳೆದ ವರ್ಷವಷ್ಟೇ ನಾನು ರಾಜಕೀಯಕ್ಕೆ ಬಂದು ಸಮಾಜ ಸೇವೆ ಮಾಡುತ್ತಿರುವೆ, ಸತೀಶ ಜಾರಕಿಹೊಳಿ ಫೌಂಡೇಶನ್‌ನಿಂದ ಕ್ರೀಡೆ, ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಿದ್ದೇವೆ, ತಂದೆ ಹಗಳು-ರಾತ್ರಿ ಎನ್ನದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ರಾಹುಲ್ ಜಾರಕಿಹೊಳಿ 23 ನೇ ಅದ್ಧೂರಿ ಜನ್ಮದಿನಾಚರಣೆ ಮಾಡಿಕೊಂಡರು, ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹೂಗುಚ್ಚ ನೀಡಿ ಜನ್ಮದಿನ ಶುಭಕೋರಿದರು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಊಟ, ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
PublicNext
02/10/2022 10:14 pm