ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಚಿವ ಸ್ಥಾನಕ್ಕಿಂತ ಅಭಿವೃದ್ಧಿ ಮುಖ್ಯ; ಶ್ರೀಮಂತ ಪಾಟೀಲ

ಅಥಣಿ : ಕಾಗವಾಡ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಪಡಿಸುವುದೇ ನನ್ನ ಗುರಿಯಾಗಿದೆ ಹೊರತು, ಸಚಿವ ಸಂಪುಟದಲ್ಲಿ ಸೇರ್ಪಡೆಯಾಗುವುದಲ್ಲ ಎಂದು ಮಾಜಿ ಸಚಿವ ಹಾಗೂ ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಹೇಳಿದ್ದಾರೆ.

ಅವರು ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಾರ್ಥನಳ್ಳಿ ಗ್ರಾಮದಲ್ಲಿ 21.40 ಕೋಟಿ ವೆಚ್ಚದ ಪಾರ್ಥನಳ್ಳಿ ಹಳೆ ಕಿರಣಗಿ ರಸ್ತೆ , 212 ಲಕ್ಷ ವೆಚ್ಚದ ಪಾರ್ಥನಳ್ಳಿ ಜಾಧವ ತೋಟದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾ ಡಿ , ಕಾಗವಾಡ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ನನ್ನದಾಗಿದೆ, ಮೂಲ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಚರಂಡಿ, ಶಾಲಾ ಕಟ್ಟಡ, ಶೌಚಾಲಯ, ರೈತರ ಜಮೀನುಗಳಿಗೆ ನೀರಾವರಿ, ಶಿಕ್ಷಕರ ನೇಮಕಾತಿ, ಆಸ್ಪತ್ರೆ ಸೇರಿದಂತೆ ಹಲವಾರು ಸೌಲಭ್ಯಗಳು ಜನರಿಗೆ ದೊರೆಯಬೇಕು.

ಇದೇ ಸಂದರ್ಭದಲ್ಲಿ ಜ್ಯೋತಿ ನಗರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.

ಈ ವೇಳೆ ಪಂಚಾಯತ್ ರಾಜ್ಯ ಇಲಾಖೆಯ ಅಭಿಯಂತರ ವೀರಣ್ಣ ವಾಲಿ, ಎಸ್ .ಎ.ಸಾಂವಗಾಂವ, ಮಾಜಿ ತಾಲೂಕಾ ಪಂಚಾಯಿತಿ ಸದಸ್ಯ ಅಪ್ಪಣ್ಣ ಮುಜಗಣ್ಣವರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಮುಜಗಣ್ಣವರ, ಮುಖಂಡ ಬಾಹುಸಾಹೇಬ ಜಾಧವ, ಸಿದರಾಯ ಗೊಲಬಾವಿ, ನಾನಾಸಾಹೇಬ ತೇಲಿ, ಶಿವಾನಂದ ಅವತಾಡೆ ಸೇರಿದಂತೆ ಇತರರು

Edited By : PublicNext Desk
PublicNext

PublicNext

02/10/2022 06:57 pm

Cinque Terre

3.52 K

Cinque Terre

0

ಸಂಬಂಧಿತ ಸುದ್ದಿ