ಬೆಳಗಾವಿ: ನಾನು ಮುಖ್ಯಮಂತ್ರಿ ಇದ್ದಿದ್ರೇ ಇಲ್ಲೇ ಸ್ಥಳದಲ್ಲೇ ನಿಮ್ಮ ಸಮಸ್ಯೆಗಳನ್ನು ಈಡೇರಿಸುತ್ತಿದ್ದೆ. ಆದ್ರೇ, ಸರ್ಕಾರ ಈ ಅಹವಾಲು ಈಡೇರಿಸಬೇಕಾಗಿದ್ದರಿಂದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಎಷ್ಟು ಸಾಧ್ಯ ಅಷ್ಟೂ ಬೇಡಿಕೆ ಈಡೇರಿಸಿ ಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಇಂದು ಬೈಲಹೊಂಗಲ ಪಟ್ಟಣದಲ್ಲಿ ಗಾಣಿಗ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ಗಾಣಿಗ ಸಮಾಜದ ಕಾರ್ಯಕ್ರಮಕ್ಕೆ ತಪ್ಪದೇ ಬರ್ತಿದ್ದೇನೆ. ಕಾರ್ಯಕ್ರಮದಲ್ಲಿ ಸಾಕಷ್ಟು ಬೇಡಿಕೆಗಳನ್ನಿಟ್ಟು ಮನವಿ ನೀಡಿದ್ದೀರಿ. ನಿಮ್ಮ ಮನಸ್ಸಿನಲ್ಲಿ ನಾನು ಇನ್ನೂ ಮುಖ್ಯಮಂತ್ರಿ ಇದ್ದೇನೆ ಅಂತಾ ತಿಳಿದು ಮನವಿ ಕೊಟ್ಟಿದ್ದೀರಿ. ನಿಮ್ಮ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ನೀಡುತ್ತೇನೆ ಎಂದು ತಿಳಿಸಿದರು.
ಬೈಲಹೊಂಗಲ ಪಟ್ಟಣದಲ್ಲಿ ಗಾಣಿಗ ಸಮಾಜದ ಸಮುದಾಯ ಭವನ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಯಾವುದೇ ನಿಗಮ, ಮಂಡಳಿ ಮಾಡದೇ ನಿಮ್ಮ ಬೇಡಿಕೆ ಈಡೇರಿಸಿದ್ದೇನೆ. ನಿಗಮ, ಮಂಡಳಿ ಮಾಡುವಂತೆ ಸಿಎಂ ಅವರ ಗಮನಕ್ಕೆ ತರುತ್ತೇನೆ. ಗಾಣಿಗ ಸಮಾಜದ ಹೆಣ್ಣು ಮಕ್ಕಳು ಎಲ್ಲಿ ವರೆಗೂ ಓದುತ್ತಾರೆ... ಅವರಿಗೆ ಓದಿಸಿ. ವಿದ್ಯೆಯಿಂದ ಮಾತ್ರ ಏನೂ ಬೇಕಾದರೂ ಮಾಡಲು ಸಾಧ್ಯ ಎಂದು ಬಿಎಸ್‌ವೈ ಹೇಳಿದರು.
PublicNext
18/09/2022 08:26 pm