ಬೆಳಗಾವಿ: ಇತ್ತೀಚಿಗೆ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನವಾಗಿದ್ದರು ಈ ಹಿನ್ನಲೆ ಇಂದು ಉಮೇಶ್ ಕತ್ತಿ ನಿವಾಸಕ್ಕೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಭೇಟಿ ನೀಡಿ ಉಮೇಶ್ ಕತ್ತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇಂದು ಬೆಳಗ್ಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿರುವ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಉಮೇಶ್ ಕತ್ತಿ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ ನಮನ ಸಲ್ಲಿಸಿ, ರಾಜ್ಯಪಾಲರು ಉಮೇಶ್ ಕತ್ತಿ ಪತ್ನಿ, ಪುತ್ರಿ, ಪುತ್ರನಿಗೆ ಸಾಂತ್ವನ ಹೇಳಿದರು.
ಇದೆ ವೇಳೆ ಉಮೇಶ್ ಕತ್ತಿ ರಾಜಕೀಯವಾಗಿ ಬೆಳೆದು ಬಂದಿದ್ದರ ಕುರಿತು ರಾಜ್ಯಪಾಲರಿಗೆ ವಿವರಿಸಿದ ಸಹೋದರ ರಮೇಶ್ ಕತ್ತಿ ವಿವಿರಿಸಿದರು. ಈ ವೇಳೆ ರಾಜ್ಯಪಾಲರಿಗೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸಾಥ್ ನೀಡಿದರು.
PublicNext
14/09/2022 01:40 pm