ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: "ಕೇಂದ್ರದ ವಿದ್ಯುತ್ ಮಸೂದೆ ತಿದ್ದುಪಡಿ ರೈತರಿಗೆ ಮಾರಕ"

ಬೆಳಗಾವಿ: ಕೇಂದ್ರ ಸರಕಾರ ಇಂದು ರೈತ ವಿರೋಧಿ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಕೇಂದ್ರದ ವಿದ್ಯುತ್ ತಿದ್ದುಪಡಿ ಮಸೂದೆಯಿಂದ ವಿದ್ಯುತ್ ಖಾಸಗೀಕರಣಗೊಂಡು ರೈತರಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್. ಆರ್. ಬಸವರಾಜಪ್ಪ ಕಿಡಿಕಾರಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ತಿದ್ದುಪಡಿ ಮಸೂದೆಯಿಂದ ರೈತರಿಗೆ ಅನ್ಯಾಯವಾಗುತ್ತೆ. ಈ ಮಸೂದೆ ಸಂಪೂರ್ಣ ಖಾಸಗೀಕರಣದಿಂದ ಕೂಡಿದ್ದು, ಅನ್ನದಾತರಿಗೆ ಸಂಕಷ್ಟದ ದಿನಗಳನ್ನು ತರುತ್ತದೆ ‌ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಕೇಂದ್ರ ಸರಕಾರ ಗ್ಯಾಸ್ ಸಬ್ಸಿಡಿ ನೀಡಿ ಅದನ್ನು ಜನರಿಂದ ಮತ್ತೇ ಕಿತ್ತುಕೊಂಡಿತು. ರೈತರು ಈಗಲೂ ಹಲವು ಸಮಸ್ಯೆಗಳಿಂದ ಇಲ್ಲಿ ನರಳುತ್ತಿದ್ದರೆ ಅವರು "ಜನಸ್ಪಂದನ" ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು. ರಾಜ್ಯದ ರೈತ ನಾಯಕರು ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

10/09/2022 03:41 pm

Cinque Terre

6.44 K

Cinque Terre

0

ಸಂಬಂಧಿತ ಸುದ್ದಿ