ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕಾಂಗ್ರೆಸ್ ಗೆ ದೇಶ ಇಬ್ಬಾಗ ಮಾಡಿದ ಕಳಂಕದ ಖ್ಯಾತಿ ಇದೆ; ಕಾರಜೋಳ

ಕಾಂಗ್ರೆಸ್ ನವರು ದೇಶ ಇಬ್ಬಾಗ ಮಾಡಿದ ಕಳಂಕ ಹೊತ್ತಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ ನಾಯಕರು ತಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಇಬ್ಬಾಗ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ್ನಾಡಿದ ಅವರು ದೇಶ ಇಬ್ಬಾಗ ಮಾಡಿದ ಪಾಪ ಪ್ರಜ್ಞೆ ಕಾಂಗ್ರೆಸ್ ನವರಿಗೆ ಕಾಡುತ್ತಿದೆ. ಅದಕ್ಕಾಗಿ ಭಾರತ ಜೋಡೊ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಕಡೆಯಿಂದ ಭಾರತವನ್ನು ಜೋಡಿಸಲು ಆಗುವುದಿಲ್ಲ. ಕಾಂಗ್ರೆಸ್ ಉಳಿಸಿಕೊಳ್ಳಲು ಆಗುವುದಿಲ್ಲ ಎಂದು ಹರಿಹಾಯ್ದರು.

ಭಾರತ ಅಖಂಡ ಭಾರತವಾಗಿರಬೇಕೆಂಬ ಪೂರ್ವಜರ ಕನಸಾಗಿತ್ತು. ಆ ಕನಸನ್ನು ಹುಸಿ ಮಾಡಿದವರು ಕಾಂಗ್ರೆಸ್ ಎಂದರು.

ಮುಂಬರವ 2023ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಯ 18 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Edited By :
PublicNext

PublicNext

17/09/2022 04:26 pm

Cinque Terre

24.4 K

Cinque Terre

0

ಸಂಬಂಧಿತ ಸುದ್ದಿ