ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 'ಕಾಂಗ್ರೆಸ್‌ನ್ನ ಮೊದಲು ದೇಶದಲ್ಲಿ ಬ್ಯಾನ್‌ ಮಾಡಬೇಕು'; ಕಟೀಲ್ ಕಿಡಿ

ಬೆಳಗಾವಿ: ದೇಶದಲ್ಲಿ ಮೊದಲು ನಿಷೇಧ ಮಾಡಬೇಕಿರುವುದು ಕಾಂಗ್ರೆಸ್‌ನ್ನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪಿಎಫ್‌ಐ ಸಂಘಟನೆ ನಿಷೇಧ ಮಾಡಿದ ಮೇಲೆ ಕಾಂಗ್ರೆಸ್‌ನವರು ದೇಶದಲ್ಲಿ ಆರ್‌ಎಸ್‌ಎಸ್ ನಿಷೇಧ ಮಾಡಬೇಕು ಎಂದು ಹೇಳಿಕೆಗೆ ಕಾಂಗ್ರೆಸ್‌ಗೆ ಪ್ರತ್ಯುತ್ತರ ನೀಡಿದ ಅವರು, ದೇಶದಲ್ಲಿ ಪಿಎಫ್‌ಐ, ಎಸ್‌ಡಿಪಿಐ, ಕೆಎಫ್‌ಡಿಗಳು ಆತಂರಿಕ ಭದ್ರತೆಗೆ ಸಮಸ್ಯೆಗಳನ್ನು ಮಾಡಲು ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೇರಣೆ ಕೊಟ್ಟಿದ್ದು ಕಾಂಗ್ರೆಸ್ ಎಂದು ಹರಿಹಾಯ್ದರು.

ಗಾಂಧಿಜೀಗೆ ಮೊದಲೇ ಗೊತ್ತಿತ್ತು, ಕಾಂಗ್ರೆಸ್ ಸ್ವಾತಂತ್ರ್ಯ ಬಂದ ಬಳಿಕ ಆಡಳಿತ ಮಾಡಿದರೆ ದೇಶ ಹಾಗೂ ಕಾಂಗ್ರೆಸ್ ಹಾಳಾಗುತ್ತದೆ ಎಂದು. ಅದಕ್ಕೆ ಅವರು ಹೇಳಿದ್ದರು ಸ್ವಾತಂತ್ರ್ಯದ ನಂತರ ಅದನ್ನು ವಿಸರ್ಜನೆ ಮಾಡಿ ಎಂದಿದ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ಸಾರಿ ಅದನ್ನು ಅಧ್ಯಯನ ಮಾಡಿ ಅವರ ಕಾಲಘಟದಲ್ಲಿ ಪಿಎಫ್‌ಐ, ಹಂತಕರು, ಗೋರಕ್ಷರನ್ನು ರಕ್ಷಣೆ ಮಾಡಿದ್ದಾರೆ. ಇಂಥ ಸಂಘಟನೆಗೆ ಎಷ್ಟು ಶಕ್ತಿ ಕೊಟ್ಟಿದ್ದಾರೆ ಎಂದು ಅಧ್ಯಯನ ಮಾಡಿದರೆ ಸಿದ್ದರಾಮಯ್ಯನವರೇ ಹೇಳುತ್ತಾರೆ ಕಾಂಗ್ರೆಸ್‌ನ್ನು ನಿಷೇಧ ಮಾಡಿ ಎಂದು ಹೇಳುತ್ತಾರೆ.

Edited By : Somashekar
PublicNext

PublicNext

29/09/2022 02:03 pm

Cinque Terre

29.14 K

Cinque Terre

4

ಸಂಬಂಧಿತ ಸುದ್ದಿ