ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ

ಬೈಲಹೊಂಗಲ : 2024-25ನೇ ಸಾಲಿನ ಹಿಂಗಾರು ಹಂಗಾಮಿಗೆ ಕೃಷಿ ಇಲಾಖೆಯಿಂದ  ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಅವರು ಗುರುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆಯಿಂದ ನಡೆದ ಹಿಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ರೈತರಿಗೆ ಸ್ಥಳಿಯವಾಗಿ ಬೀಜಗಳು ಲಭ್ಯವಾಗುವ ಉದ್ದೇಶದಿಂದ ಒಟ್ಟು 20 ಬೀಜ ವಿತರಣಾ ಕೇಂದ್ರಗಳನ್ನು ಪ್ರಾರಂಭಿಸಿ ರೈತರಿಗೆ ಅವಶ್ಯಕ ಜೋಳ, ಕಡಲೆ, ಗೋಧಿ, ಗೋವಿನಜೋಳ ಇತ್ಯಾದಿ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದರು.

ಇದೇ ಸಂಧರ್ಭದಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ  ವಿತರಿಸುವ ಕೂರಿಗೆ, ನೇಗಿಲು, ರೋಟೋವೇಟರ್ ಹಾಗೂ ರಾಶಿಯಂತ್ರ ಹಾಗೂ ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕ ಹಾಗೂ ಪಿವಿಸಿ ಪೈಪ್‍ಗಳನ್ನು ರೈತರಿಗೆ ವಿತರಿಸಿದರು. 

ಕೃಷಿ ಉಪ ನಿರ್ದೇಶಕ ಎಸ್.ಬಿ. ಕೊಂಗವಾಡ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಕೃಷಿಕ ಸಮಾಜದ ಅಧ್ಯಕ್ಷ ಗುರು ಮೆಟ್ಟಗುಡ್ಡ, ಉಪಾಧ್ಯಕ್ಷ ಶಿವಪುತ್ರಪ್ಪ ತಟವಟಿ, ಮಾಜಿ ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಕುಮಾರಗೌಡ ಪಾಟೀಲ, ಸಂಜೀವಗೌಡ ಪಾಟೀಲ, ರಾಜು ಭರಮಗೌಡರ,ಶಂಬು ರುದ್ರಾಪೂರ,ಸಂಜೀವ ಮಾಳಣ್ಣವರ, ಡಾ.ಮಹಾಂತೇಶ ಕಳ್ಳಿಬಡ್ಡಿ, ರಮೇಶ ಪರಂಡಿ,ಕೃಷಿ ಇಲಾಖೆಯ ಅಧಿಕಾರಿಗಳಾದ ಎಮ್.ಎಸ್.ಬಿಸಗುಪ್ಪಿ, ಎಫ್.ಎಸ್.ಪವಾಡಿ, ಎಸ್.ಎಸ್.ಪೂಜಾರಿ, ಬಿ.ಕೆ.ಜಮಾದರ, ಎಸ್.ಎಸ್.ಮಾಳಗಿ,  ಇಲಾಖೆಯ ಸಿಬ್ಬಂದಿಗಳು ಇದ್ದರು.

Edited By : PublicNext Desk
Kshetra Samachara

Kshetra Samachara

04/10/2024 11:19 am

Cinque Terre

4.94 K

Cinque Terre

0