ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಹಸಿಗಳಿಗೆ ಆರಕ್ಷಕರಿಂದ ಸತ್ಕಾರ್

ಬೆಳಗಾವಿ:ಮಲಪ್ರಭಾ ನದಿಯಲ್ಲಿ ಮುಳುಗಿ ಪ್ರತ್ಯೇಕ ಎರಡು ಕಡೆಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯರನ್ನು ಕಾಪಾಡಿ ಪೊಲೀಸ್ ಠಾಣೆಗೆ ಒಪ್ಪಿಸಿದ ಖಾನಾಪುರ ಹಾಗೂ ಪಾರಿಶ್ವಾಡ ಗ್ರಾಮಗಳ ಯುವಕರನ್ನು ಇಂದು ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಹೌದು ದಿನಾಂಕ ಒಂದು ವಾರದ ಹಿಂದೆ ರ ಬಸವನ ಕುಡಚಿ ಗ್ರಾಮದ ಜೀಜಾಬಯಿ ಕೊಳಚೆ ಎಂಬವರು ಖಾನಾಪುರದ ಮಲಪ್ರಭಾ ಬ್ರಿಡ್ಜ್ ಹತ್ತಿರದ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಅವರನ್ನು ಖಾನಾಪುರದ ಯುವಕರಾದ ವಿನೋದ ಸುತಾರ್, ಶ್ರೀಪಾದ ಉಸಿನ್‌ಕರ್, ದರ್ಶನ್ ಪೋಳ್, ಎಂಬ ಯುವಕರು ರಕ್ಷಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಅದೇ ರೀತಿ ಇದೆ ಬುಧವಾರ ದಂದು ಬಸ್ಸಾಪೂರ ಗ್ರಾಮದ ೯೫ ವರ್ಷದ ವೃದ್ಧೆ ಬಾಳಮ್ಮ ನಾಗಪ್ಪ ನಾವಲಗಿ ಪಾರಿಶ್ವಾಡ ಗ್ರಾಮದ ಹತ್ತಿರದ ಮಲಪ್ರಭಾ ನದಿ ನೀರಿನಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಪಾರಿಶ್ವಾಡ ಗ್ರಾಮದ ಯುವಕರಾದ ಐಜಾಜ್ ಮಾರೀಹಾಳ್, ಜುಬೇರ್ ಬೇಪಾರಿ ಎಂಬ ಯುವಕರು ಎಂಬವರು ರಕ್ಷಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಈ ಯುವಕರ ಸಾಹಸವನ್ನು ಮೆಚ್ಚಿ ಇಂದು ಶುಕ್ರವಾರ ಬೆಳಗಾವಿ ಎಸ್‌ಪಿ ಡಾ. ಸಂಜೀವ್ ಪಾಟೀಲ್ ಜಿಲ್ಲಾ ಪೊಲೀಸ್ ವತಿಯಿಂದ ಈ ಎಲ್ಲಾ ಯುವಕರನ್ನು ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಎಸ್‌ಪಿ ಡಾ. ಸಂಜೀವ್ ಪಾಟೀಲ್, ಇಂದು ಈ ಮಹಿಳೆಯರ ರಕ್ಷಣೆ ಮಾಡಿದ ನೀವೆಲ್ಲ ಹೀರೋಗಳಾಗಿದ್ದೀರಿ. ನಾನು ನಿಮ್ಮ ತಂದೆತಾಯಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮಗೆ ನಿಮ್ಮ ತಂದೆತಾಯಿಗಳು ಉತ್ತಮವಾದ ಗುಣಗಳನ್ನು ನಿಮಗೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಾರಾದರೂ ತೊಂದರೆಯಲ್ಲಿದ್ದಾಗ ಜನ ಸಹಾಯಕ್ಕಾಗಿ ಧಾವಿಸದೇ ಮೊಬೈಲ್‌ನಲ್ಲಿ ವೀಡಿಯೋ ಮಾಡುತ್ತ ನಿಲ್ಲುತ್ತಾರೆ. ಆದರೆ ನೀವು ಬೇರೆಯವರಂತೆ ನೀವು ನಿಲ್ಲದೇ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದವರ ಜೀವ ಉಳಿಸಿದ್ದೀರಿ. ಹಾಗಾಗಿ ನಿಮ್ಮೆಲ್ಲರಿಗೆ ಬೆಳಗಾವಿ ಜಿಲ್ಲಾ ಪೊಲೀಸರು ಹಾಗೂ ನಾಗರಿಕರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.

Edited By : Nirmala Aralikatti
Kshetra Samachara

Kshetra Samachara

08/10/2022 04:43 pm

Cinque Terre

12.84 K

Cinque Terre

0

ಸಂಬಂಧಿತ ಸುದ್ದಿ