ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಯಲ್ಲಮ್ಮದೇವಿ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ

ಬೆಳಗಾವಿ: ದಸರಾ ಹಬ್ಬದ ಹಿನ್ನಲೆ ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಜಾತ್ರೆಯ ಸಂಭ್ರಮ ಜೋರಾಗಿದ್ದು, ಮಹಾರಾಷ್ಟ್ರ ಕರ್ನಾಟಕ ಆಂಧ್ರ ಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

ಯಲ್ಲಮ್ಮನ ಸನ್ನಿಧಿಯಲ್ಲಿ ಅಪಾರ ಪ್ರಮಾಣದ ಭಕ್ತಸಾಗರ ಆಗಮಿಸಿರುವ ಹಿನ್ನೆಲೆಯಲ್ಲಿ ಯಲ್ಲಮ್ಮದೇವಿ ದರ್ಶನಕ್ಕಾಗಿ ಬೆಳಿಗ್ಗೆಯಿಂದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಕಿಲೋಮೀಟರ್ ಗಟ್ಟಲೆ ಸುಡು ಬಿಸಿಲಿನಲ್ಲಿ ನಿಂತಿದ್ದಾರೆ.

ನವರಾತ್ರಿ ಉತ್ಸವ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರುತ್ತಿದೆ. ಕಳೆದ ಮೂರು ವರ್ಷಗಳಿಂದ ಕರೋನ ಹಿನ್ನಲೆಯಲ್ಲಿ ದೇವಿ ದರ್ಶನಕ್ಕೆ ನಿರಾಸೆಗೊಂಡಿದ್ದ ಭಕ್ತ ಸಮೂಹಕ್ಕೆ ಈ ವರ್ಷ ದೇವಿ ದರ್ಶನ ಪಡೆಯುವ ಭಾಗ್ಯ ಲಭಿಸಿದೆ.

ಏಕಾಏಕಿ ದೊಡ್ಡಪ್ರಮಾಣದಲ್ಲಿ ಭಕ್ತ ಸಮೂಹ ಹರಿದು ಬಂದ ಹಿನ್ನಲೆ ಭಕ್ತರ ನಿಯಂತ್ರಣಕ್ಕೆ ಆಡಳಿತ ಮಂಡಳಿ ಹಾಗೂ ಪೊಲೀಸರು ಹರಸಾಹಸ ಪಡುವಂತಾಗಿದೆ.‌ ನಾಳೆ ಮತ್ತು ನಾಡಿದ್ದು ಸವದತ್ತಿ ಯಲ್ಲಮ್ಮದೇವಿ ಸನ್ನಿಧಿಗೆ ಇನ್ನಷ್ಟು ಭಕ್ತರು ಹರಿದು ಬರುವ ಸಾಧ್ಯತೆ ‌ಹೆಚ್ಚಾಗಿದೆ.

Edited By : Somashekar
PublicNext

PublicNext

02/10/2022 06:29 pm

Cinque Terre

36.65 K

Cinque Terre

1

ಸಂಬಂಧಿತ ಸುದ್ದಿ