ಅಥಣಿ : 7.5 ಮೀಸಲಾತಿ ಸಿಗುವವರೆಗೂ ವಾಲ್ಮೀಕಿ ಜಯಂತಿ ಬಹಿಷ್ಕರಿಸುವುದಾಗಿ ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ರಮೇಶ ಸಿಂದಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ತಾಲೂಕ ದಂಡಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ ನಮ್ಮ ನಮ್ಮ ಸಮಾಜದ ಶ್ರೀಮಠದ ಆದೇಶದಂತೆ ಈ ತಿಂಗಳಿನ ಅಂತ್ಯದವರೆಗೆ ಮೀಸಲಾತಿ ವಿಚಾರವಾಗಿ ಸರ್ಕಾರ ನಮ್ಮ ಶ್ರೀಗಳಿಗೆ ಗಡುವನ್ನು ಕೊಟ್ಟಿದ್ದು ಅಲ್ಲಿವರೆಗೆ ಕಾದುನೋಡುತ್ತೇವೆ.
ನಮಗೆ ಏನಾದರೂ ಸರ್ಕಾರ 7.5 ಮೀಸಲಾತಿ ಕೊಟ್ಟಿದ್ದೆ ಆದರೆ ಬರುವ 9.10.2022 ರಂದು ವಾಲ್ಮೀಕಿ ಜಯಂತಿಯನ್ನು ತಾಲೂಕಿನಲ್ಲಿ ಅದ್ದೂರಿಯಾಗಿ ಆಚರಿಸುವುದು ಇಲ್ಲವಾದರೆ ಆಚರಿಸದೇ ಇರಲು ನಿರ್ಧರಿಸುವುದಾಗಿ ತಿಳಿಸಿದರು. ಈ ವೇಳೆ ಮುಖಂಡರಾದ ಅಶೋಕ ಯಲಹಡಲಗಿ, ಬಾಬು ಹುಲ್ಯಾಳ, ಮಹಾದೇವ ಬಿಸಿಲನಾಯಕ, ಸೇರಿದಂತೆ ಸಮಾಜದ ಅನೇಕ ಬಂಧುಗಳು ಶ್ರೀಗಳ ಆದೇಶವನ್ನು ಸಮರ್ಥಿಸಿಕೊಂಡ್ರು.
ಸಭೆಯ ಅಧ್ಯಕ್ಷತೆ ವಹಿಸಿದ ತಹಶಿಲ್ದಾರ ಸುರೇಶ್ ಮುಂಜೆ ಮಾತನಾಡಿ ಸಮಾಜದ ಬಂಧುಗಳ ಅಭಿಪ್ರಾಯದಂತೆ ಕಾರ್ಯಕ್ರಮ ಮಾಡಲಾಗುವುದು ಎಂದರು. ಈ ವೇಳೆ ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
23/09/2022 07:25 pm