ಅಥಣಿ: ಸ್ಥಳೀಯ ಮೋಟಗಿ ಮಠದ ಪ್ರಭುಚನ್ನಬಸವ ಮಹಾಸ್ವಾಮಿಗಳ ವಿರಚಿತ ಮಹಾತ್ಮರ ಚರಿತಾಮೃತ, 216 ವಿಶ್ವವಿಭೂತಿಗಳ ಜೀವನ ಕಥನ ಗ್ರಂಥದ ಐದನೇ ಮುದ್ರಣದ ಲೋಕಾರ್ಪಣೆ ಮತ್ತು ಗ್ರಂಥದ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ತುಮಕೂರಿನ ಸಿದ್ಧಗಂಗಾಮಠದ ಉದ್ದಾನೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಸೆ .24 ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಮೋಟಗಿ ಮಠದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರಿನ ಸಿದ್ದಲಿಂಗ ಸ್ವಾಮೀಜಿಗಳು ಗ್ರಂಥವನ್ನು ಲೋಕಾರ್ಪಣೆಗೊಳಿಸುವರು. ಗದಗ - ಡಂಬಳ ಪ್ರಾಧಿಕಾರದ ಡಾ. ತೋಟದ ಸಿದ್ದರಾಮ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ, ಗಡಿ ಅಭಿವೃದ್ಧಿ ಅಧ್ಯಕ್ಷ ಡಾ.ಸಿ.ಸೋಮಶೇಖರ, ವಿಶ್ರಾಂತ ಕುಲಪತಿ ಮಲ್ಲೇಪುರಂ ವೆಂಕಟೇಶ, ನಾಡೋಜ ಜಗದೀಶ ಗುಡಗುಂಟಿಮಠ ಇತರರು ಪಾಲ್ಗೊಳ್ಳಲಿದ್ದು ಸರ್ವರಿಗೂ ಸ್ವಾಗತ ಎಂದು ಹೇಳಿದರು.
ಈ ವೇಳೆ ಹಿರಿಯರಾದ ಬಿ ಎಲ್ ಪಾಟೀಲ, ಸದಾಶಿವ ಬುಟಾಳೆ, ರಮೇಶಗೌಡ ಪಾಟೀಲ, ಎಂ ಡಿ ತೊದಲಬಾಗಿ, ಪ್ರಕಾಶ ಮಹಾಜನ, ಹನುಮಂತ ಬೆಳ್ಳಂಕಿ, ಮುತ್ತಣ್ಣ ಸಂತಿ, ವಿಜಯ ನೇಮಗೌಡ, ನಿತ್ಯಾನಂದ ಚರಂತಿಮಠ, ಶಿವಲೀಲಾ ಪಟ್ಟಣಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Kshetra Samachara
22/09/2022 11:48 pm