ಬೆಳಗಾವಿ: ಡಿಜಿಟಲ್ ವಾಚ್ ಮತ್ತು ಇನ್ನಿತರ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನ ಬಳಿಸಿ ಕೆಪಿಟಿಸಿಎಲ್ ಪರೀಕ್ಷೆ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಿದಷ್ಟು ಅಕ್ರಮದ ಆಳ ಹೆಚ್ಚುತ್ತಾ ಹೋಗುತ್ತಿದೆ. ಪರೀಕ್ಷೆಯಲ್ಲಿ ನಕಲು ಮಾಡಲು ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಮೋಡಿಪೈ ಮಾಡಿ, ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದ ಮತ್ತೆ ಮೂವರ ಕಿರಾತಕರನ್ನು ಬೆಳಗಾವಿ ಜಿಲ್ಲಾ ಸೂಪರ್ ಕಾಪ್ಸ್ ಬಂಧಿಸಿದ್ದಾರೆ. ಇದೀಗ ಪರೀಕ್ಷೆ ಆಕ್ರಮದಲ್ಲಿ ಭಾಗಿಯಾದ ಆರೋಪಿಗಳ ಸಂಖ್ಯೆ ೨೦ ಕ್ಕೆ ಏರಿದಂತಾಗಿದೆ.
ಅರಬಾವಿಯ ಅಕ್ಷಯ ಭಂಡಾರಿ(33), ಬಿರಣಗಡ್ಡಿಯ ಬಸವರಾಜ ದುಂದನಟ್ಟಿ(34) ಹಾಗೂ ರಾಜಾಪುರದ ಶ್ರೀಧರ ಕಟ್ಟಿಕಾರ ಬಂಧಿತ ಆರೋಪಿಗಳು. ಈ ಮೂವರು ಪ್ರಕರಣದ ಪ್ರಮುಖ ಕಿಂಗ್ ಫಿನ್ ಸಂಜು ಬಂಢಾರಿಗೆ ಅಕ್ಷಯ ಬಂಢಾರಿ ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ತಂದು ಮಾಡಿಪೈ ಮಾಡಿ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಸ್‌ಗಳನ್ನ ಸಂಜು ಭಂಡಾರಿಯಿಂದ ಪಡೆದು ಶ್ರೀಧರ ಕಟ್ಟಿಕಾರ ಅಭ್ಯರ್ಥಿಗಳಿಗೆ ವಿತರಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಇನ್ನು ಬಸವರಾಜ ದುಂದನಟ್ಟಿಯು ಶಿರಹಟ್ಟಿಯಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಗಳಿಗೆ ಉತ್ತರ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಬಂಧಿತರಿಂದ ಮೂರು ಮೊಬೈಲ್, ಒಂದು ದ್ವಿಚಕ್ರವಾಹನ ಹಾಗೂ ಮತ್ತು 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು 18 ಮಾಡಿಫೈ ಮಾಡಿರುವ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಜಪ್ತಿ ಮಾಡಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ಎಸ್ ಪಿ ಸಂಜೀವ ಪಾಟೀಲ ತಿಳಿಸಿದ್ದಾರೆ.
Kshetra Samachara
16/09/2022 09:22 pm