ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಗಡಿಜಿಲ್ಲಿಯಲ್ಲಿ ಮಕ್ಕಳ ಕಳ್ಳರ ವದಂತಿ ಹಾವಳಿ ಎಸ್ ಪಿ ಸ್ಪಷ್ಟಣೆ

ಬೆಳಗಾವಿ: ಕಳೆದ ಒಂದು ವಾರದಿಂದ ಗಡಿ ಜಿಲ್ಲೆ ಬೆಳಗಾವಿಯ ಹಲವು ಭಾಗದಲ್ಲಿ ಮಕ್ಕಳಗಳ್ಳರು ಬಂದಿದ್ದಾರೆ ಅಂತಾ, ಪ್ಲಾಸ್ಟಿಕ್, ಐಸ್ ಕ್ರೀಮ್ ಮಾರುವುರ ಮತ್ತು ನಾಗಾ ಸಾಧುಗಳ ಸೇರಿದಂತೆ ಅನುಮಾನಸ್ಪದ ವ್ಯಕ್ತಿಗಳು ಮೇಲೆ ಸುಖಾಸುಮ್ಮನೆ ಹಲ್ಲೆ ಮಾಡಿರುವ ಘಟನೆಗಳು ಸಾಕಷ್ಟು ನಡೆದಿದ್ದವು.

ಈ ಕುರಿತು ಜಿಲ್ಲಾ ಪೊಲೀಸರು ಅಲರ್ಟ್ ಆಗಿ ಈ ವಿಷಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ಘಟನೆ ಜರುಗಿದ ತಾಲೂಕು, ಮತ್ತು ಗ್ರಾಮಗಳಲ್ಲಿ ಆಳವಾದ ತನಿಖೆ ಮಾಡಿದಾಗ, ಮಕ್ಕಳಗಳ್ಳರ ಬಂದಿದ್ದಾರೆ ಎನ್ನುವುದು ಕೇವಲ ವದಂತಿ ಎಂದು ತಿಳಿದು ಬಂದಿದೆ. ಅದಕ್ಕಾಗಿ ಸುಖಾಸುಮ್ಮನೆ ಸಿಕ್ಕ ಸಿಕ್ಕ ಅವರ ಮೇಲೆ ಹಲ್ಲೆ ಮಾಡುವುದು, ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿಸುವದು ತಪ್ಪು ಎಂದು ಎಸ್ ಪಿ ಸಂಜೀವ ಪಾಟೀಲ ಹೇಳಿದ್ದಾರೆ.

Edited By : Shivu K
PublicNext

PublicNext

14/09/2022 10:50 am

Cinque Terre

32.76 K

Cinque Terre

0

ಸಂಬಂಧಿತ ಸುದ್ದಿ