ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ ಶುಗರ್ಸ್ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ಅಥಣಿ :‌ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಸನ್ 2022-23 ನೇ ಕಬ್ಬು ನುರಿಸುವ ಹಂಗಾಮಿಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಶುಭ ಮಹೂರ್ತದಲ್ಲಿ ಗಣ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕಾರ್ಖಾನೆ ಅಧ್ಯಕ್ಷ ಶ್ರೀಮಂತ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಚಾಲನೆ ನೀಡಿ ಮಾತನಾಡುತ್ತಾ ಕಳೆದ ವರ್ಷ ಸನ್ 2021-22 ನೇ ಸಾಲಿನಲ್ಲಿ ನಮ್ಮ ಕಾರ್ಖಾನೆಗೆ ರೈತ ಬಾಂಧವರು ಸುಮಾರು 17 ಲಕ್ಷ ಟನ್ ಕಬ್ಬು ನೀಡಿ ಸಹಕರಿಸಿ, ವಿಶೇಷ ದಾಖಲೆ ನಿರ್ಮಿಸಲು ಕಾರಣೀಭೂತರಾಗಿದ್ದೀರಿ. ಅದೇ ಪ್ರಕಾರ ನಾವು ರೈತರಿಗೆ ಪ್ರತಿ ಟನ್ ಗೆ 2700 ರೂ. ರಂತೆ ದರವನ್ನು ನೀಡಿದ್ದೇವು. ಈ ಸನ್ 2022 - 23 ನೇ ಸಾಲಿನ ಹಂಗಾಮಿನಲ್ಲಿ ನಮ್ಮ ಕಾರ್ಖಾನೆಯೂ 20 ಲಕ್ಷ ಟನ್ ಕಬ್ಬು ನುರಿಸುವ ಉದ್ದೇಶವನ್ನು ಹೊಂದಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಟನ್ ಗೆ ರೂ. 2800/- ರಂತೆ ದರವನ್ನು ನೀಡಲು ಸಿದ್ಧರಾಗಿರುವುದಾಗಿ ಹೇಳಿದರು.

ಈ ಸಮಯದಲ್ಲಿ ಅಥಣಿ ಶುಗರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಯೋಗೇಶ ಪಾಟೀಲ, ಸುಶಾಂತ ಪಾಟೀಲ, ಅಬ್ದುಲಬಾರಿ ಮುಲ್ಲಾ ಹಾಗೂ ಕಾರ್ಖಾನೆಯ ನಿರ್ದೇಶಕ ಮಂಡಳಿಯ ಸದಸ್ಯರು, ಸ್ಥಳೀಯ ಮುಖಂಡರು, ರೈತರು, ಕಾರ್ಖಾನೆಯ ವಿವಿಧ ಇಲಾಖೆಯ ಅಧಿಕಾರಿ ವರ್ಗ, ಸಿಬ್ಬಂದಿಗಳು ಕಾರ್ಮಿಕರು ಅಪಾರ ಸಂಖ್ಯೆಯಲ್ಲಿ ಇದ್ದರು.

Edited By : PublicNext Desk
Kshetra Samachara

Kshetra Samachara

06/10/2022 09:25 am

Cinque Terre

6.38 K

Cinque Terre

0