ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುಡ್ಡು ಕೊಟ್ರೆ ನಕಲಿ RTPCR ವರದಿ ಸಿಗುತ್ತೆ: ಅಧಿಕಾರಿಗಳೇ ಏನ್ಮಾಡ್ತಿದ್ದೀರಿ?

ಚಿಕ್ಕೋಡಿ(ಬೆಳಗಾವಿ ಜಿಲ್ಲೆ) ಹಣ ಕೊಟ್ರೆ ಸಾಕು ನಕಲಿ ಕೋವಿಡ್ ನೆಗೆಟಿವ್ ವರದಿ ಸಿಗುತ್ತೆ. ಖಾಸಗಿ ಬಸ್ ಬುಕಿಂಗ್ ಆಫೀಸ್‌ನಲ್ಲೇ ಈ ಜಾಲ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ನಕಲಿ ನೆಗೆಟಿವ್ RTPCR ವರದಿ ನೀಡುತ್ತಿದ್ದವರ ಜಾಲವನ್ನು ಪತ್ತೆ ಮಾಡಿದ್ದಾರೆ.

ಯೆಸ್... ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪೋಲಿಸರಿಂದ ಈ ಕಾರ್ಯಾಚರಣೆ ನಡೆದಿದ್ದು ಕೃತ್ಯ ಎಸಗಿದ ಮೂವರನ್ನು ಬಂಧಿಸಿದ್ದಾರೆ. ರಾಜ್ಯ ಪ್ರವೇಶಿಸುವ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದನ್ನೆ ಬಂಡವಾಳ ಮಾಡಿಕೊಂಡ ಈ ಖದೀಮರು ತಮ್ಮ ಬಸ್ ಬುಕಿಂಗ್ ಆಫೀಸ್‌ನಲ್ಲೇ ನಕಲಿ ನೆಗೆಟಿವ್ RTPCR, ನಕಲಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ನೀಡುತ್ತಿದ್ದರು. ಈ ಮೂಲಕ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿ ಇರುವ ಕೋಗನಳ್ಳಿ ಚೆಕ್ ಪೋಸ್ಟ್ ಮೂಲಕ ಹೊರರಾಜ್ಯದವರನ್ನು ದಾಟಿಸಲು ಪ್ಲಾನ್ ಮಾಡಿದ್ದರು. ಇದಕ್ಕಾಗಿ ಖದೀಮರು ಪ್ರಯಾಣಿಕರಿಂದ ತಲಾ 1500 ರೂ ಹಣ ವಸೂಲಿ ಮಾಡುತ್ತಿದ್ದರು. ಕೃತ್ಯ ಎಸಗಿದ ಸುರೇಶ್ ಮಾಡಹಳ್ಳಿ, ಜಗದೀಶ ಎಂಬು, ಸತೀಶ್ ಶಿಂಧೆ ಎಂಬ ಮೂವರು ಅರೆಸ್ಟ್ ಆಗಿದ್ದು ಒಟ್ಟು 12 ಜನರ ಮೇಲೆ ಕೇಸ್ ದಾಖಲಾಗಿದೆ. ಕೋವಿಡ್ ನಿಯಂತ್ರಣ ನಿಯಮ‌ ಉಲ್ಲಂಘನೆ ಅಡಿಯಲ್ಲಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Edited By :
Kshetra Samachara

Kshetra Samachara

05/02/2022 03:59 pm

Cinque Terre

23.58 K

Cinque Terre

0

ಸಂಬಂಧಿತ ಸುದ್ದಿ