ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮಳೆ ತಂದ ಅವಾಂತರ : ಬೈಕ್ ಗಳೆರಡು ಮುಖಾಮುಖಿ ಇಬ್ಬರಿಗೆ ಗಂಭೀರ ಗಾಯ!

ಬೆಳಗಾವಿ: ಮಳೆಯಿಂದಾಗುತ್ತಿರುವ ಅವಾಂತರಗಳು ಒಂದೆರಡಲ್ಲ. ಸದ್ಯ ಇದೇ ಮಳೆಯಿಂದಾಗಿ ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ರಾಮದುರ್ಗ ಪಟ್ಟಣದ ಹೊರವಲಯದ ಮಲಪ್ರಭಾ ನದಿಯ ಹೊಸ ಸೇತುವೆ ಮೇಲೆ ನಡೆದಿದೆ.

ರಾಮದುರ್ಗ ಪಟ್ಟಣದಿಂದ ರಂಕಲಕೊಪ್ಪ ಗ್ರಾಮದ ಕಡೆಗೆ ಹೊರಟಿದ್ದ ಬೈಕ್ ಹಾಗೂ ರಾಮದುರ್ಗ ಪಟ್ಟಣದ ಕಡೆ ಬರುತ್ತಿದ್ದ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿವೆ. ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೈಕ್ ಸವಾರರಿಬ್ಬರಿಗೂ ಸರಿಯಾದ ರಸ್ತೆ ಕಾಣದ ಕಾರಣ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಪಘಾತ ನೋಡಿದ ಸ್ಥಳೀಯರು ಕೂಡಲೇ ಆ್ಯಂಬುಲೆನ್ಸ್ ಗೆ ಕರೆ ಮಾಡಿ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Edited By : Nagesh Gaonkar
PublicNext

PublicNext

11/09/2022 10:23 pm

Cinque Terre

23.13 K

Cinque Terre

0

ಸಂಬಂಧಿತ ಸುದ್ದಿ