ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಈ ಭಾಗಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸಂಜೆ ಮಳೆರಾಯ ಅಬ್ಬರಿಸಿದ್ದಾರೆ. ಈ ಮಧ್ಯೆ ಇಂದು ನಗರದ ಬಹುತೇಕ ಭಾಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಲಿದೆ ಎಂದು ಬೆಸ್ಕಾಂ ಪ್ರಕಟನೆ ಹೊರಡಿಸಿದೆ. ಕಾಮಗಾರಿ ನಿರ್ವಹಣೆ ಸೇರಿದಂತೆ ಹಲವು ಕಾರಣಗಳಿಂದ ಈ ಭಾಗದಲ್ಲಿ ಇಂದು ವಿದ್ಯುತ್ ಕಡಿತವಾಗಲಿದೆ.

ಬೆಂಗಳೂರು ದಕ್ಷಿಣ ವಲಯ

ಮೈಕೋ ಲೇಔಟ್ ಪೊಲೀಸ್ ಠಾಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, 16 ನೇ ಮುಖ್ಯರಸ್ತೆ ಬಿಟಿಎಂ ಲೇಔಟ್, ಕೆಪಿಆರ್‌ ಸಿ ಲೇಔಟ್, ಜಯನಗರ ಈಸ್ಟ್ ಎಂಡ್ ಮುಖ್ಯರಸ್ತೆ, ಗೊಟ್ಟಿಗೆರೆ, ಶಾಂತಿನಿಕೇತನ ಲೇಔಟ್, ನ್ಯೂ ಹೊರೈಜನ್ ಕಾಲೇಜು ರಸ್ತೆ, ವಿವೇಕಾನಂದ ಲೇಔಟ್, ಕೃಪಾನಿಧಿ ಕಾಲೇಜು ರಸ್ತೆ, ಕುಂದಲಹಳ್ಳಿ ಸೇರಿವೆ. ಸಕಾರ ಆಸ್ಪತ್ರೆ ರಸ್ತೆ, ತಾವರೆಕೆರೆ ಮುಖ್ಯರಸ್ತೆ, ಮಡಿವಾಳ ವಿ.ಪಿ.ರಸ್ತೆ ಮತ್ತು ಚಿಕ್ಕಾಡುಗೋಡಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು ಪೂರ್ವ ವಲಯ

ಉಮರ್ ‌ನಗರ, ಚಾಣಕ್ಯ ಲೇಔಟ್, ನಾಗವಾರ, ಕೆ ನಾರಾಯಣಪುರ, ದೊಮ್ಮಸಂದ್ರ ರಸ್ತೆ, ಕೃಪಾನಿಧಿ ಕಾಲೇಜು ರಸ್ತೆ, ಗೌತಮಪುರ, ಕೇಂಬ್ರಿಡ್ಜ್ ಲೇಔಟ್, ಜೋಗುಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಪೈ ಲೇಔಟ್, ವರ್ತೂರು ರಸ್ತೆ, ಹೊಯ್ಸಳನಗರ ಮತ್ತು ಕೋಡಿಹಳ್ಳಿ 2ನೇ ಮುಖ್ಯ ಭಾಗಗಳಲ್ಲಿ ಸಂಚರಿಸಲಿದೆ. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತವಾಗಬಹುದು.

ಬೆಂಗಳೂರು ಪಶ್ಚಿಮ ವಲಯ

ಪಶ್ಚಿಮ ವಲಯದಲ್ಲಿ ಬಿಇಎಲ್ ಲೇಔಟ್ 1 ಮತ್ತು 2ನೇ ಹಂತ, ಉಳ್ಳಾಲ ನಗರ, ಮಾರುತಿ ನಗರ, ರಾಬಿನ್ ಥಿಯೇಟರ್ ಸರ್ಕಲ್, ಟಿ.ಪಿ.ಮುಖ್ಯ ರಸ್ತೆ, ಬಿಎಚ್‌ಇಎಲ್ ಲೇಔಟ್, ಉತ್ತರಹಳ್ಳಿ, ಪ್ರಶಾಂತ ನಗರ, ನಾಗರಭಾವಿ 9ನೇ ಬ್ಲಾಕ್, ಕಾಮಾಕ್ಷಿಪಾಳ್ಯ, ವೃಷಭಾವತಿ ನಗರ, ಸುಂಕದಕಟ್ಟೆ ಮತ್ತು ಚಂದ್ರಾ ಲೇಔಟ್ ಭಾಗಗಳಲ್ಲಿ ವಿದ್ಯುತ್ ಪೂರೈಕೆ ತೊಂದರೆಯಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಆಗಬಹುದು.

ಬೆಂಗಳೂರು ಉತ್ತರ ವಲಯ

ಉತ್ತರ ವಲಯದಲ್ಲಿ ಟಿ ದಾಸರಹಳ್ಳಿ, ನೃಪತುಂಗ ರಸ್ತೆ, ಮಲ್ಲಸಂದ್ರ, ಬಾಬಾ ನಗರ, ಆರ್‌ ಟಿ ನಗರ, ಕೊಡಿಗೇಹಳ್ಳಿ, ಎಂಎಸ್‌ ಪಾಳ್ಯ ವೃತ್ತ, ಏರ್‌ ಫೋರ್ಸ್‌ ರಸ್ತೆ, ಹೆಸರಘಟ್ಟ, ಮಾವಳ್ಳಿಪುರ ಮತ್ತು ಮಂಜುನಾಥನಗರದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಮಸ್ಯೆ ಅಗಲಿದೆ.

ಇನ್ನೂ ಸಂಡೇ ಮನೆಯಲ್ಲಿ ರುಚಿ ರುಚಿಯಾದ ಅಡುಗೆ ಮಾಡೋಣ ಆಂದ್ರೆ ಪವರ್ ಕಟ್ ನಿಂದ ಸಮಸ್ಯೆ ಉಂಟಾಗಲಿದೆ. ನಾನ್ ವೆಜ್ ರೆಸಿಪಿ ಮಾಡಲು ಮಿಕ್ಸಿ ಬಳಸಲೇಬೇಕು. ಆದ್ರೆ ಮಧ್ಯಾಹ್ನದ ವೇಳೆಗೆ ವಿದ್ಯುತ್ ಇಲ್ಲದಿದ್ರೆ ಅಡುಗೆ ಮಾಡೋದಾದ್ರೂ ಹೇಗೆ? ಮಧ್ಯಾಹ್ನದ ಬಿಸಿಲು ಮನೆಯಲ್ಲಿ ಫ್ಯಾನ್, ಎಸಿ ಇಲ್ಲದೇ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೀಗೆ ಹೀಗೆ ಪದೇ ಪದೇ ಪವರ್ ಕಟ್ ಮಾಡಿದ್ರೆ ಏನು ಮಾಡೋದು ಎಂದು ಗೃಹಿಣಿಯರು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನೂ ಅದೆಷ್ಟೋ ಜನ ವರ್ಕ್ ಫ್ರಂ ಹೋಮ್ ಪದ್ಧತಿಯಂತೆ ಮನೆಗಳಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ನಾಲ್ಕರಿಂದ ಐದು ಗಂಟೆ ಕಾಲ ವಿದ್ಯುತ್ ಕೈ ಕೊಟ್ರೆ ಸಮಸ್ಯೆ ಆಗುತ್ತೆ ಅಂತಾರೆ ವರ್ಕ್ ಫ್ರಂ ಹೋಮ್ ಉದ್ಯೋಗಿಗಳು.

Edited By : Vijay Kumar
Kshetra Samachara

Kshetra Samachara

17/04/2022 07:52 am

Cinque Terre

1.82 K

Cinque Terre

0

ಸಂಬಂಧಿತ ಸುದ್ದಿ