ಬೆಂಗಳೂರು: ನಗರದ ವಿದ್ಯುತ್ ಮಾರ್ಗಗಳನ್ನು ಉನ್ನತೀಕರಿಸುವ ಮತ್ತು ನಿರ್ವಹಣೆ ಮಾಡುವ ಕಾಮಗಾರಿಯನ್ನು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ಆರಂಭಿಸಿರುವುದರಿಂದ ಇಂದು ಮತ್ತು ನಾಳೆ (ಏಪ್ರಿಲ್ 12-13) ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಪ್ರದೇಶಗಳ ವಿವರ ಇಂತಿದೆ. ಮಂಗಳವಾರ (ಏಪ್ರಿಲ್ 12) ವಿದ್ಯುತ್ ವ್ಯತ್ಯಯಗೊಳ್ಳುವ ಪ್ರದೇಶಗಳಿವು
ಪಶ್ಚಿಮ ವಲಯ: ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯಗೊಳ್ಳಲಿದೆ. ಹೆಗ್ಗನಹಳ್ಳಿ ಕ್ರಾಸ್, ನಂಜರಸಪ್ಪ ಲೇಔಟ್ (ಸ್ಕೈಲೈನ್ ಬಿಬಿಎಂಪಿ ಪಾರ್ಕ್ ಹತ್ತಿರ), ಸಾಣಕ್ಕಿ ಬಯಲು, ರಾಮನ್ ಕಾಲೇಜು ರಸ್ತೆ, ವೃಷಭಾವತಿ ನಗರ, ಮಲ್ಲತ್ತಹಳ್ಳಿ ಲೇಔಟ್, ಈಸ್ಟ್ ವೆಸ್ಟ್ ಕಾಲೇಜು ರಸ್ತೆ, ದ್ವಾರಕಾ ಬಸ ರಸ್ತೆ, ಕೆಎಲ್ಇ ಕಾಲೇಜು ರಸ್ತೆ, ಬಿಡಿಎ ಏರಿಯಾ ಬ್ಲಾಕ್ 1, ವಿಎಂ ನಗರ, ಎಚ್ವಿಆರ್ ಲೇಔಟ್, ಮಾರುತಿ ನಗರ (ರಾಜರಾಜೇಶ್ವರಿ ವಿಭಾಗ).
ಪೂರ್ವ ವಲಯ: ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯಗೊಳ್ಳಲಿದೆ. ರಾಮಮೂರ್ತಿ ನಗರ, ಜೈಭೀಮ ನಗರ, ಕೆ.ಜಿ.ಪುರ ಮುಖ್ಯರಸ್ತೆ, ಉದಯನಗರ, ಕೋಡಿಹಳ್ಳಿ ಮುಖ್ಯರಸ್ತೆ.
ದಕ್ಷಿಣ ವಲಯ: ದಕ್ಷಿಣ ವಲಯದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಮಣಿಪಾಲ್ ಕೌಂಟಿ ರಸ್ತೆ, ಎಇಸಿಎಸ್ ಲೇಔಟ್, ಸುಭಾಷ್ ನಗರ, ನೀಲಾದ್ರಿ ರಸ್ತೆ, ಮಾರತ್ಹಳ್ಳಿ, ಕಾವೇರಿ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ತುಳಸಿ ಥಿಯೇಟರ್ ರೋಡ್, ಸೇಂಟ್ ಜಾನ್ಸ್ ಹಾಸ್ಟೆಲ್, ಕೋರಮಂಗಲ 2ನೇ ಹಂತ, ಚಿಕ್ಕಆಡುಗೋಡಿ, ಜೈ ಭೀಮ ನಗರ, ಜೆಸಿ ಕೈಗಾರಿಕಾ ಪ್ರದೇಶ, ವಿಎಂ ನಗರ ಮತ್ತು ಎಚ್ವಿಆರ್ ಲೇಔಟ್.
ಉತ್ತರ ವಲಯ: ಬೆಂಗಳೂರು ಉತ್ತರ ವಲಯದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಿಎಂಟಿಐ, ಸ್ಪರ್ಶ ಆಸ್ಪತ್ರೆ, ಹನುಮಾನ್ ಲೇಔಟ್, ದ್ವಾರಕಾ ನಗರ, ಪೈಪ್ಲೈನ್ ರಸ್ತೆ, ದೊಡ್ಡಬ್ಯಾಲಕೆರೆ, ಕೆಂಪಾಪುರ, ಲುಡು ನಗರ, ಸಿಲುವೆಪುರ, ರಾಘವೇಂದ್ರ ಧಾಮ, ಕುರುಬರಹಳ್ಳಿ, ಹುರಳಿ ಚಿಕ್ಕನಹಳ್ಳಿ, ಹೆಸರಘಟ್ಟ.
ಬುಧವಾರ (ಏಪ್ರಿಲ್ 13)
ಬೆಂಗಳೂರು ಪಶ್ಚಿಮ ವಲಯ (ಬೆಳಿಗ್ಗೆ 10ರಿಂದ ಸಂಜೆ 5)
ಹೆಗ್ಗನಹಳ್ಳಿ ಕ್ರಾಸ್, ಎಚ್ವಿಆರ್ ಲೇಔಟ್, ಸಣ್ಣಕ್ಕಿ ಬಯಲು, ರಾಮನ್ ಕಾಲೇಜು ರಸ್ತೆ, ವೃಷಭಾವತಿ ನಗರ, ಮಲ್ಲತ್ತಹಳ್ಳಿ ಲೇವಟ್, ಈಸ್ಟ್ ವೆಸ್ಟ್ ಕಾಲೇಜು ರಸ್ತೆ, ದ್ವಾರಕಾ ಬಸ ರಸ್ತೆ, ಕೆಎಲ್ಇ ಕಾಲೇಜು ರಸ್ತೆ, ವಿಘ್ನೇಶ್ವರ ನಗರ, ನಂದಗೋಕುಲ ಲೇಔಟ್, ಚಂದ್ರ ಲೇಔಟ್, ಬಾಪೂಜಿ ಲೇಔಟ್.
ಬೆಂಗಳೂರು ದಕ್ಷಿಣ ವಲಯ (ಬೆಳಿಗ್ಗೆ 10ರಿಂದ ಸಂಜೆ 5)
ದೊಡ್ಡಮಂಗಲ, ನೀಲಾದ್ರಿ ರಸ್ತೆ, ಶಾರದಾ ನಗರ ಮತ್ತು ಜೆಸಿ ಕೈಗಾರಿಕಾ ಪ್ರದೇಶ
ಬೆಂಗಳೂರು ಉತ್ತರ ವಲಯ (ಬೆಳಿಗ್ಗೆ 10ರಿಂದ 5)
ಪೀಣ್ಯ ಪೊಲೀಸ್ ಠಾಣೆ ಮತ್ತು ಸುತ್ತಮುತ್ತಲ ಪ್ರದೇಶ, ಅಮರಾವತಿ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶ
Kshetra Samachara
12/04/2022 09:47 am